

ಅಳವಂಡಿ: ಸಮೀಪದ ತಿಗರಿ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಮಾರುತಿ ಜಾತ್ರೆಯ ಕುರಿತ ಪೂರ್ವಭಾವಿ ಸಭೆ ಬುಧವಾರ ನಡೆಯಿತು.
ಮಾರುತೇಶ್ವರ ಜಾತ್ರೆ ಯುಗಾದಿ ದಿನ ನಡೆಯಲಿದೆ. ಪ್ರತಿವರ್ಷದಂತೆ ೀ ವರ್ಷವೂ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ನೂತನ ಉಚ್ಛಾಯ (ಲಘುರಥ) ನಿರ್ಮಾಣಕ್ಕೆ ಗ್ರಾಮಸ್ಥರು ನಿರ್ಧರಿಸಿದರು. ಹಬ್ಬದಂದು ಧಾರ್ಮಿಕ ಸಭೆ ನಡೆಸಲು ಮತ್ತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಒಪ್ಪಿಗೆ ಸೂಚಿಸಲಾಯಿತು.
ಪ್ರಮುಖರಾದ ಭೀಮನಗೌಡ ಪೊಲೀಸ್ ಪಾಟೀಲ, ಸಂಗಪ್ಪ ಕವಲೂರು, ಶಂಕರಪ್ಪ ಅಗಸಿಮನಿ, ಗಣೇಶ ಪೂಜಾರ, ದುರ್ಗಪ್ಪ ಹರಿಜನ, ಬಸಟೆಪ್ಪ ಕುಂಟಗೇರಿ, ಬೀರಪ್ಪ ಕುಂಟಗೇರಿ, ದೇವಪ್ಪ ನೀರಲಗಿ, ಪ್ರಕಾಶ ಅಗಸಿಮನಿ, ಮಂಜು ಬಡಿಗೇರ ಇತರರಿದ್ದರು.