ವಿದ್ಯಾರ್ಥಿಗಳು ಓದಿಗೆ ಪ್ರಥಮ ಆದ್ಯತೆ ನೀಡಲಿ

Kavaluru Swasta Sankapla Programmee
ಕವಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಸ್ಥ ಸಂಕಲ್ಪ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ಸಜ್ಜನ ಉದ್ಘಾಟಸಿದರು.
Published on

ಅಳವಂಡಿ: ಯುವಜನರು, ವಿದ್ಯಾರ್ಥಿಗಳು ಧೂಮಪಾನ, ಮದ್ಯಪಾನ ಹಾಗೂ ಇತರ ದುಶ್ಚಟದಿಂದ ದೂರವಿದ್ದು, ವ್ಯಸನಮುಕ್ತ ಜೀವನ ನಡೆಸಬೇಕೆಂದು ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ಸಜ್ಜನ ತಿಳಿಸಿದರು.

ಕವಲೂರು ಗ್ರಾಮದ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿದ್ದ ಸ್ವಸ್ಥ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಜನತೆ ದೇಶದ ಶಕ್ತಿ ಹಾಗೂ ಆಸ್ತಿ.

ಯುವಕರು ವಿದ್ಯಾವಂತರಾದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ದುಶ್ಚಟದಿಂದ ದೂರವಿದ್ದರೆ ಜೀವನದ ಹಾದಿ ಸುಗಮವಾಗಲಿದ್ದು, ಓದಿಗೆ ಪ್ರಥಮ ಆದ್ಯತೆ ನೀಡಬೇಕೆಂದರು.

ಮುಖ್ಯ ಶಿಕ್ಷಕ ಗವಿಸಿದ್ದನಗೌಡ ಗೌಡರ, ವಲಯ ಮೇಲ್ವಿಚಾರಕ ಮೋಟಯ್ಯ, ಪ್ರಮುಖರಾದ ನಾಗರಾಜ, ರಾಜಪ್ಪ, ಕವಿತಾ ನಾಯಕ, ವೀರಯ್ಯ ತೆಂಗುಟಿಮಠ, ಪ್ರಭು, ಶಶಿಕುಮಾರ, ಟಿ.ಎನ್.ಮೇಟಿ, ಒಕ್ಕೂಟದ ಅಧ್ಯಕ್ಷೆ ಶೋಭಾ, ಸೇವಾ ಪ್ರತಿನಿಧಿ ಶಾಂಭವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net