ಯುವಕರು ಸಹ ಸಂಸ್ಕಾರ-ಧೈರ್ಯ ಗುಣಗಳನ್ನು ಕಲಿಯಲಿ

Untitled design (45)
Published on

ಅಳವಂಡಿ: ಸ್ವಾಭಿಮಾನ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಮಹಾನ್ ನಾಯಕರಲ್ಲಿ ಶಿವಾಜಿ ಆದರ್ಶಪ್ರಾಯರಾಗಿದ್ದಾರೆ ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯ ತಿಳಿಸಿದರು.

ಗ್ರಾಮದಲ್ಲಿ ಶಿವಾಜಿ ಮಹಾರಾಜ ಸೇವಾ ಸಮಿತಿ ಹಾಗೂ ಗ್ರಾಮಸ್ಥರಿಂದ ಆಯೋಜಿಸಿದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.

ಶಿವಾಜಿ ಶೌರ್ಯ, ಧೈರ್ಯ, ದೇಶಪ್ರೇಮ, ಮಾತೃಪ್ರೇಮ ಎಂದೆಂದಿಗೂ ಪ್ರೇರಣೆದಾಯಕವಾಗಿವೆ. ಸಾರ್ವಜನಿಕರು ಜಾತ್ಯತೀತವಾಗಿ ಇಂತಹ ದೇಶಭಕ್ತರ ಜಯಂತಿಗಳನ್ನು ಆಚರಿಸಬೇಕು. ಅಂದಾಗ ಮಾತ್ರ ಸರ್ವರಲ್ಲಿ ಒಗ್ಗಟ್ಟಿನ ಭಾವನೆ ಮೂಡಲು ಸಾಧ್ಯ. ಶಿವಾಜಿ ಬಾಲ್ಯದಲ್ಲಿಯೇ ಧೈರ್ಯ, ನ್ಯಾಯಯುತ ಮೌಲ್ಯಗಳನ್ನು ಕಲಿತರು. ಯುವಕರು ಸಹ ಸಂಸ್ಕಾರ, ಧೈರ್ಯ ಗುಣಗಳನ್ನು ಕಲಿತು ಜೀವನದಲ್ಲಿ ಸಾಧನೆ ಮೆರೆಯಬೇಕು ಎಂದರು.

ತಳಿರು ತೋರಣ, ಹೂಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ ಶಿವಾಜಿ ಪ್ರತಿಮೆಯನ್ನಿರಿಸಿ ಮಹಿಳೆಯರ ಕಳಸ, ಕುಂಭ ಹಾಗೂ ವಾದ್ಯ ಮೇಳದೊಂದಿಗೆ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಪ್ರಮುಖರಾದ ಕುಮಾರಸ್ವಾಮಿ ಆರೇರ, ಪ್ರಶಾಂತ ಆರೇರ, ನರಸಿಂಗಪ್ಪ ಆರೇರ, ಸಿದ್ದಪ್ಪ, ಬಸವರಾಜ, ಶಿವಶಂಕ್ರಪ್ಪ, ಮಲ್ಲಪ್ಪ ಬೆಣಕಲ್, ಗುರುಬಸವರಾಜ, ಅನ್ವರ ಗಡಾದ, ಹನುಮಂತ, ತೋಟಯ್ಯ, ಭರಮಪ್ಪ, ನಜೀರ, ನಾಗರಾಜ, ರೇಣುಕಪ್ಪ, ವೆಂಕಟೇಶ, ಶೇಖರಪ್ಪ, ವಿರೂಪಾಕ್ಷಿ, ಶ್ರೀನಿವಾಸ, ಬಸವರಾಜ, ಚನ್ನಪ್ಪ ಮುತ್ತಾಳ, ಶ್ರೀನಿವಾಸ, ಮಂಜುನಾಥ, ಸತೀಶ, ಉಮೇಶಗೌಡ, ಗೂಳರಡ್ಡಿ, ಭರಮಪ್ಪ, ಮಂಜುನಾಥ, ವೀರಭದ್ರಯ್ಯ, ಇಸ್ಮಾಯಿಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net