ಡೆಂೆ ವೈರಸ್ ಸೋಂಕಿತ ರೋಗ

Untitled design(4)
ಬೆಳಗಟ್ಟಿಯಲ್ಲಿ ಡೆಂೆ ಮಾಸಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ರಮೇಶ, ಜಿ.ಎಸ್.ಬೂಸನೂರಮಠ, ವಸಂತ, ಪ್ರಮೋದ, ಬಿ.ಎನ್.ನರೇಗಲ್, ಸರೋಜಾ, ಹೊನ್ನಪ್ಪಗೌಡ ಇತರರಿದ್ದರು.
Published on

ಅಳವಂಡಿ: ಡೆಂೆ ರೋಗ ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣ ಅತ್ಯವಶ್ಯ ಎಂದು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಸಲಹೆಗಾರ ರಮೇಶ ತಿಳಿಸಿದರು.

ಬೆಳಗಟ್ಟಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ಡೆಂೆ ವಿರೋಧಿ ಮಾಸಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಡೆಂೆ ಒಂದು ವೈರಸ್. ಇದು ಈಡಿಸ್ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಇದಕ್ಕೆ ಲಕ್ಷಣದ ಮೇಲೆ ಚಿಕಿತ್ಸೆ ನೀಡಬಹುದು. ಇದು ಸಾಮಾನ್ಯವಾಗಿ ತಲೆನೋವು, ಜ್ವರ, ಸ್ನಾಯು ಮತ್ತು ಕೀಲುನೋವು, ವಾಕರಿಕೆ ಇದರ ಲಕ್ಷಣಗಳಾಗಿವೆ. ಇವುಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಎನ್‌ಯುಬಿಡಿಸಿಪಿ ಸೂಪರವೈಸರ್ ಜಿ.ಎಸ್.ಬೂಸನೂರಮಠ ಮಾತನಾಡಿ, ಸೊಳ್ಳೆಗಳು ಸಂಗ್ರಹಿತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡಿಕೊಳ್ಳುತ್ತವೆ. ಕಾರಣ ಮನೆಯಲ್ಲಿ ಸಂಗ್ರಹಿಸಿದ ನೀರನ್ನು ಆಗಾಗ ಬದಲಿಸಬೇಕು. ಹಾಗೂ ಮನೆಯ ಸುತ್ತಮುತ್ತಲ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ನಿರ್ಮೂಲನೆಗೆ ಸೊಳ್ಳೆ ಬತ್ತಿ ಬಳಸಬೇಕು ಎಂದರು.

ಆರೋಗ್ಯ ನೀರಿಕ್ಷಣಾಧಿಕಾರಿ ವಸಂತ ಗದ್ದಿಕೇರಿ, ಎನ್‌ಯುಬಿಡಿಸಿಪಿ ಸೂಪರವೈಸರ್ ಜಿ.ಎಸ್.ಬೂಸನೂರಮಠ, ಬಿ.ಎನ್.ನರೇಗಲ್, ವಿಬಿಡಿ ಮೇಲ್ವಿಚಾರಕ ಪ್ರಮೋದ ಸಿಂದೋಗಿ, ಆರೋಗ್ಯ ಸುರಕ್ಷತಾಧಿಕಾರಿ ಯಲ್ಲಮ್ಮ, ಅಂಗನವಾಡಿ ಕಾರ್ಯಕರ್ತೆ, ಸರೋಜಾ, ಪ್ರಮುಖರಾದ ಹೊನ್ನಪ್ಪಗೌಡ, ಖಾದರಸಾಬ ಆಲೂರು, ದೇವೇಂದ್ರಗೌಡ, ಮುಸ್ತುಸಾಬ, ಇಮ್ಮಣ್ಣ ಮೇಗಳಮನಿ, ನಿಂಗಪ್ಪ ಚಿಲವಾಡಗಿ, ಗುಡದಪ್ಪ, ಕನಕನಗೌಡ, ಹನುಮಪ್ಪ, ಗುಡದಪ್ಪ, ಖಾದರಸಾಬ ಮೂಲಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net