ಶಿವಾಜಿ ಮಹಾರಾಜರ ಮಾತೃತ್ವ ಪ್ರೇಮ, ಶೂರತ್ವ ಅಳವಡಿಸಿಕೊಳ್ಳಿ

19ALD02
Published on

ಅಳವಂಡಿ: ಎಲ್ಲರೂ ಶಿವಾಜಿ ಮಹಾರಾಜರ ದೇಶಪ್ರೇಮ, ಮಾತೃತ್ವ ಪ್ರೇಮ, ಶೂರತ್ವವನ್ನು ಮೈಗೂಡಿಸಿಕೊಳ್ಳಬೇಕು. ದೇಶ ಕಂಡ ಅಪ್ರತಿಮ ಹೋರಾಟಗಾರರಲ್ಲಿ ಶಿವಾಜಿ ಮಹಾರಾಜರು ಒಬ್ಬರು ಎಂದು ಪಿಡಿಒ ಕೊಟ್ರಪ್ಪ ಅಂಗಡಿ ತಿಳಿಸಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿ ಬುಧವಾರ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಕಾರ್ಯದರ್ಶಿ ಬಸವರಾಜ, ಪ್ರಮುಖರಾದ ಸೌಜನ್ಯ, ಹನುಮಂತ ಮೂಲಿಮನಿ, ಹನುಮಪ್ಪ ಜೋಗಿನ, ಪರಶುರಾಮ, ಹನುಮಂತ ಮೋರನಾಳ, ಮಲ್ಲಪ್ಪ ಬೆಣಕಲ್, ಶಿವಮೂರ್ತಿ, ದೇವೆಂದ್ರರಡ್ಡಿ, ಶಂಕ್ರಪ್ಪ, ಮಾರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net