ಸಿದ್ಧಾಂತಗಳಿದೆ ಬದುಕು ಬದಲಿಸುವ ಶಕ್ತಿ

Untitled design (10)
Published on

ಅಳವಂಡಿ: ಶಂಕರಾಚಾರ್ಯರು ಜಗತ್ತು ಕಂಡ ಶ್ರೇಷ್ಠ ಆಧ್ಯಾತ್ಮಿಕ ತತ್ವಜ್ಞಾನಿ ಎಂದು ಪಿಡಿಒ ಕೊಟ್ರಪ್ಪ ಅಂಗಡಿ ಹೇಳಿದರು.

ಗ್ರಾಮದ ಗ್ರಾಪಂ ಶುಕ್ರವಾರ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಶಂಕರಾಚಾರ್ಯರು ಅಜ್ಞಾನದ ನಾಶವೇ ಮೋಕ್ಷ. ದಾನ ಮಾಡುವ ಗುಣ ಹಾಗೂ ಶುದ್ಧ ಮನಸ್ಸು ಅತ್ಯಂತ ಶ್ರೇಷ್ಠ ತೀರ್ಥಯಾತ್ರೆ ಸಮ ಎಂದು ಬೋಧಿಸಿದ್ದಾರೆ. ಅವರ ಸಿದ್ಧಾಂತಗಳು ಮನುಷ್ಯನ ಬದುಕನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದರು. ಕಾರ್ಯದರ್ಶಿ ಬಸವರಾಜ, ಪ್ರಮುಖರಾದ ಹನುಮಂತ ಮೂಲಿಮನಿ, ವಸಂತ ನಾಗರಳ್ಳಿ, ರಮೇಶ ಭಾವಿಹಳ್ಳಿ, ಸಿಬ್ಬಂದಿಗಳಾದ ಶಿವಮೂರ್ತಿ, ದೇವೇಂದ್ರರಡ್ಡಿ, ಏಕಯ್ಯ, ಮಾರುತಿ, ಗೀತಾ, ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net