

ಅಳವಂಡಿ: ಮಾನವ ಕುಲದ ಉನ್ನತಿಗೆ ಶ್ರಮಿಸಿದ ಶರಣರ ಆದರ್ಶಗಳನ್ನು ಸರ್ವರು ಅಳವಡಿಸಿಕೊಳ್ಳಿ ಎಂದು ಮೈನಳ್ಳಿ-ಬಿಕನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.
ಸಮೀಪದ ಬಿಸರಹಳ್ಳಿಯ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದಿಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಶರಣರ ನುಡಿಗಳು ಮಾನವ ಕುಲಕ್ಕೆ ಒಳಿತು ಬಯಸಿವೆ. ಶಾಂತಿ ಮಂತ್ರದಿಂದ ಮನುಕುಲಕ್ಕೆ ಒಳಿತಾಗಲಿದೆ. ಆದ್ದರಿಂದ ಎಲ್ಲರೂ ಧರ್ಮ ಹಾಗೂ ಶಾಂತಿಯಿಂದ ಜೀವಿಸಿ ಎಂದರು.
ಪ್ರಮುಖರಾದ ನಾಗಪ್ಪ ಬಿಕನಳ್ಳಿ, ಈರಣ್ಣ ಸಜ್ಜನ, ರುದ್ರಯ್ಯ ಬ್ರಹನ್ಮಠ, ಅಂದಯ್ಯ ಹಿರೇಮಠ, ನೀಲಕಂಠಪ್ಪ ಬಳಿಗಾರ, ಅಂದಪ್ಪ ಶಿಳ್ಳಿನ, ಶೇಖರಪ್ಪ ಕೊಪ್ಪಳ, ಕಂಠೆಪ್ಪ ಇತರರಿದ್ದರು.