ಶಾಂತಿ-ತಾಳ್ಮೆಯಿಂದ ಬದುಕು ಹಸನ - ಶ್ರೀ ಮರುಳಾರಾಧ್ಯ ಶಿವಾಚಾರ್ಯ ಆಶೀರ್ವಚನ

ALD05
ಅಳವಂಡಿ ರಾಜಬಾಗ್ ಸವಾರ ಉರುಸು ಕಾರ್ಯಕ್ರಮದಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿದರು. ಕವಲೂರು ಫಕೀರಸ್ವಾಮೀಜಿ, ಕೊಂಬಳಿ ಚೌಕಿಮಠದ ಸದ್ಗುರು ಗಾಡಿತಾತ, ಪ್ರಮುಖರಾದ ಡಾ.ಸಿದ್ಧಲಿಂಗಸ್ವಾಮಿ ಇನಾಮದಾರ, ಹನುಮಂತ ಮೋರನಾಳ, ಗುರುಬಸವರಾಜ ಹಳ್ಳಿಕೇರಿ ಇತರರಿದ್ದರು.
Published on

ಅಳವಂಡಿ: ಪ್ರತಿಯೊಬ್ಬರೂ ಜಾತಿ, ಮತ, ಧರ್ಮ, ಪಂಥ ಎನ್ನದೇ ಜೀವಿಸಬೇಕು. ಪ್ರತಿ ಸಮುದಾಯದ ಕಾರ್ಯಕ್ರಮದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಪಾಲ್ಗೊಳ್ಳಬೇಕು. ಇದರಿಂದ ಒಗ್ಗಟ್ಟಿನ ಭಾವನೆ ಮೂಡಲಿದೆ ಎಂದು ಶ್ರೀ ಮರುಳಾರಾಧ್ಯ ಶಿವಾಚಾರ್ಯರು ತಿಳಿಸಿದರು.

ಗ್ರಾಮದಲ್ಲಿ ಯಮನೂರಸ್ವಾಮಿ ದರ್ಗಾದ ರಾಜಬಾಗ್ ಸವಾರ ಉರುಸು ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಬುಧವಾರ ಮಾತನಾಡಿದರು.

ಅಳವಂಡಿ ಗ್ರಾಮದ ಹಿಂದು, ಮುಸ್ಲಿಂ ಸಮುದಾಯ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಪ್ರತಿ ಸಮುದಾಯದ ಕಾರ್ಯಕ್ರಮದಲ್ಲಿ ಸಹೋದರತ್ವ ಗುಣದಿಂದ ಪರಸ್ಪರ ಭಾಗವಹಿಸುತ್ತಿದ್ದು, ನಿಜಕ್ಕೂ ಇದು ಮಾದರಿ ಗ್ರಾಮವಾಗಿದೆ. ಸಮಾಧಾನ, ಶಾಂತಿ, ತಾಳ್ಮೆ, ಅಳವಡಿಸಿಕೊಳ್ಳಿ ಇದರಿಂದ ಬದುಕು ಹಸನ ಆಗಲಿದೆ ಎಂದರು.

ಮುಸ್ಲಿಂ ಧಾರ್ಮಿಕ ಗುರು ಸೈಯದ್‌ಶಾ ಮೆಹಬೂಬ ಖಾದ್ರಿ ಮಾತನಾಡಿ, ಉರುಸು, ಹಬ್ಬ-ಹರಿದಿನಗಳು ಜನರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿವೆ. ಧಾರ್ಮಿಕ ಕಾರ್ಯ, ಜಾತ್ರೆಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸುವದರಿಂದ ಜನರಲ್ಲಿ ಸಾಮೂಹಿಕವಾಗಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಲಿದೆ ಎಂದರು.

ಕವಲೂರು ಫಕೀರಸ್ವಾಮೀಜಿ, ಕೊಂಬಳಿ ಚೌಕಿಮಠದ ಸದ್ಗುರು ಗಾಡಿತಾತ, ಪ್ರಮುಖರಾದ ಡಾ.ಸಿದ್ಧಲಿಂಗಸ್ವಾಮಿ ಇನಾಮದಾರ, ಹನುಮಂತ ಮೋರನಾಳ, ಗುರುಬಸವರಾಜ ಹಳ್ಳಿಕೇರಿ, ಅನ್ವರ ಗಡಾದ್, ಮಲ್ಲಪ್ಪ ಬೆಣಕಲ್, ಅರವಿಂದಪ್ಪ ಬಿರಾದಾರ, ಗುಲಾಬಸಾಬ, ಹನುಮಂತ ಜೋಗಿನ, ನೀಲಪ್ಪ, ಪಕೀರಸಾಬ ಹಳ್ಳಿಕೇರಿ, ಪಕೀರಸಾಬ ನದಾಪ, ತಾಜುದ್ದೀನ, ಹುಸೇನಸಾಬ, ಖಾಸೀಮಸಾಬ, ಪ್ರಕಾಶರೆಡ್ಡಿ, ಶ್ರೀನಿವಾಸ, ಮಹಮದ್, ಕಾಶಿಂಸಾಬ, ಶಿವಪ್ಪ, ಅನ್ವರಬಾಷಾ, ಯಮನೂರಸಾಬ, ವೆಂಕಟೇಶ ತವದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net