ಜಾನಪದ ಬದುಕಿನ ಮಾರ್ಗದರ್ಶಿ

Folk Festival
ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಜಾನಪದ ಉತ್ಸವ ಕಾರ್ಯಕ್ರಮವನ್ನು ಪ್ರಾಚಾರ್ಯ ಜಗದೀಶ ಆಲದಕಟ್ಟಿ ಉದ್ಘಾಟಿಸಿದರು. ಉಪನ್ಯಾಸಕರಾದ ಡಾ. ನಾಗರಾಜ, ಡಾ. ಹಂಪಾದೇವಿ, ಪ್ರವೀಣಕುಮಾರ, ರೇಷ್ಮಾ ಇತರರಿದ್ದರು.
Published on

ಅಳವಂಡಿ: ಇತ್ತೀಚಿನ ವರ್ಷಗಳಲ್ಲಿ ಯುವಕರು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ದೇಸಿ ಕಲೆ, ಸಂಸ್ಕೃತಿ ಮರೆಯುತ್ತಿದ್ದಾರೆ ಎಂದು ಪ್ರಾಚಾರ್ಯ ಜಗದೀಶ ಆಲದಕಟ್ಟಿ ಕಳವಳ ವ್ಯಕ್ತಪಡಿಸಿದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.

ದೇಸಿ ಸಂಸ್ಕೃತಿ ಉಳಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಸಲುವಾಗಿ ಜಾನಪದ ಉತ್ಸವ ಆಯೋಜಿಸಲಾಗಿದೆ. ಬದುಕಿನ ಮಾರ್ಗದರ್ಶಿಯಾದ ಜಾನಪದ ಸಂಸ್ಕೃತಿ, ಕಲೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಜಾನಪದ ತನ್ನ ಮೂಲನೆಲೆಯಾದ ಗ್ರಾಮೀಣ ಭಾಗದಲ್ಲಿ ಈಗಲೂ ಜೀವಂತವಿದೆ. ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ವಿದ್ಯಾರ್ಥಿ ಮತ್ತು ಯುವ ಸಮೂಹ ಮಾಡಬೇಕಿದೆ. ಇದರ ಉಳಿವಾಗಿ ಪಾರಂಪರಿಕ ವಸ್ತುಗಳ ತಯಾರಿಕೆ, ದೇಸಿ ಆಹಾರ ಪದ್ಧತಿ, ಉಡುಗೆ-ತೊಡುಗೆ, ಸಂಗೀತ, ನೃತ್ಯ ಇತರ ಸ್ಪರ್ಧೆಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಉತ್ಸವ ಅಂಗವಾಗಿ ಕಾಲೇಜನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಆವರಣದಲ್ಲಿ ಬಗೆ ಬಗೆಯ ರಂಗೋಲಿ ಬಿಡಿಸಲಾಗಿತ್ತು. ವಿದ್ಯಾರ್ಥಿಗಳು ದೇಸಿ ಉಡುಗೆಗಳಾದ ಸೀರೆ, ಪಂಚೆ, ಶಾಲು ಧರಿಸಿ ಗಮನ ಸೆಳೆದರು.

ಉಪನ್ಯಾಸಕರಾದ ಡಾ. ನಾಗರಾಜ ಹಾವಿನಾಳ, ಡಾ. ಹಂಪಾದೇವಿ, ಪ್ರವೀಣಕುಮಾರ, ರೇಷ್ಮಾ, ಸಾಲಿಯಾ, ಶಂಕ್ರಪ್ಪ, ಮಹೇಶಕುಮಾರ, ವಿಜಯಕುಮಾರ, ಪ್ರದೀಪ, ವೆಂಕಟೇಶ, ಇಬ್ರಾಹಿಂಸಾಬ, ಸಿದ್ದಪ್ಪ, ವಿನಾಯಕ, ದೇವರಾಜ, ಕೃಷ್ಣ, ರೆಹಮಾನಸಾಬ, ರಾಘವೇಂದ್ರ, ವೀರಯ್ಯ, ಹಾಗಲೂರಪ್ಪ, ಮಹೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net