ಪತ್ರಕರ್ತರಲ್ಲಿ ಸಾಮಾಜಿಕ ಕಳಕಳಿ ಅಗತ್ಯ

Alavandi patrika dinacharane
ಅಳವಂಡಿಯಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕುಕನೂರಿನ ಶ್ರೀ ಮಹಾದೇವ ಸ್ವಾಮೀಜಿ, ಮರುಳಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ಶಂಕ್ರಮ್ಮ, ಹನುಮಂತ ಹಳ್ಳಿಕೇರಿ, ಡಾ.ಪ್ರವೀಣಕುಮಾರ, ಸಂತೋಷಕುಮಾರ, ಅನ್ವರ್, ಗುರುಬಸವರಾಜ್, ಶಿವಪ್ರಕಾಶಸ್ವಾಮಿ , ಚಂದ್ರಶೇಖರ ಸಿದ್ದಲಿಂಗೇಶ ಇತರರಿದ್ದರು.
Published on

ಅಳವಂಡಿ: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಲ್ಲಿ ಸಾಮಾಜಿಕ ಕಳಕಳಿ ಅಗತ್ಯ ಎಂದು ಕುಕನೂರಿನ ಮಹಾದೇವ ಸ್ವಾಮೀಜಿ ಹೇಳಿದರು.

ಗ್ರಾಮದ ಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಅಳವಂಡಿ ಹೋಬಳಿ ಪತ್ರಕರ್ತರು ಹಾಗೂ ಎಸ್‌ಎಸ್ ಪಿಯು ಕಾಲೇಜಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಎನ್‌ಎಸ್‌ಎಸ್ ಘಟಕದ ದೈನಂದಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ವ್ಯಕ್ತಿತ್ವ ರೂಪಿಸಿಕೊಳ್ಳುವುದರ ಜತೆಗೆ ಬದಲಾವಣೆ ಸಹಕಾರಿಯಾಗಿದೆ ಎಂದರು.

ಸಿದ್ಧೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ ಮಾತನಾಡಿ, ಬದುಕಿನಲ್ಲಿ ಜ್ಞಾನಕ್ಕೆ ಮಹತ್ವವಿದೆ. ಸಮಾಜದಲ್ಲಿರುವ ತಪ್ಪುಗಳನ್ನು ತಿದ್ದಿ ಸುಂದರ ಸಮಾಜ ನಿರ್ಮಿಸುವಲ್ಲಿ ಪತ್ರಿಕೆಗಳ ಪಾತ್ರ ಪ್ರಮುಖ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಮಾತನಾಡಿದರು.

ಕೊಪ್ಪಳ ವಿವಿ ಉಪನ್ಯಾಸಕರಾದ ಡಾ.ಪ್ರವೀಣಕುಮಾರ ಪೊಲೀಸ್ ಪಾಟೀಲ, ಸಂತೋಷ ಕುಮಾರ, ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಕವಿ ಸಮಿತಿಯ ವ್ಯವಸ್ಥಾಪಕ ಶಿವಪ್ರಕಾಶಸ್ವಾಮಿ ಇನಾಮದಾರ, ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಗ್ರಾಪಂ ಸದಸ್ಯರಾದ ಗುರು ಬಸವರಾಜ ಹಳ್ಳಿಕೇರಿ, ಅನ್ವರ ಗಡಾದ, ಪಿಎಸ್‌ಐ ಪ್ರಹ್ಲಾದ್ ನಾಯಕ, ಕಸಾಪ ತಾಲೂಕು ಅಧ್ಯಕ್ಷ ರಾಮಚಂದ್ರಗೌಡ, ಉಪನ್ಯಾಸಕ ಬಾಳಪ್ಪ, ಎಸ್.ಎಸ್.ಅಂಗಡಿ, ದೇವಮ್ಮ, ನೀಲಪ್ಪ ಹಕ್ಕಂಡಿ ಹಾಗೂ ಸ್ಥಳೀಯ ಪತ್ರಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net