ಸರ್ವಧರ್ಮಗಳ ಆರಾಧನೆಯಿಂದ ಸುಖಮಯ ಜೀವನ ಸಾಗಿಸಲು ಸಾಧ್ಯ

Alavandi pratibha puraskara
ಅಳವಂಡಿ ಗ್ರಾಮದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭಕ್ಕೆ ಗಣ್ಯರು ಗಿಡಕ್ಕೆ ನೀರು ಹಾಕಿ ಚಾಲನೆ ನೀಡಲಾಯಿತು. ಪ್ರಮುಖರಾದ ಸೈಯದ ಶಾ ಮುಸ್ತಫಾ ಖಾದ್ರಿ ಗುರುಗಳು, ಜನಾಬ ಮಹ್ಮದ್ ರಾಷಿದ ಖಾಜಿ ಗುರುಗಳು, ಶಂಕ್ರಮ್ಮ, ಶಾರಮ್ಮ, ಅನ್ವರ್, ಗುರುಮೂರ್ತಿಸ್ವಾಮಿ ಇದ್ದರು.
Published on

ಅಳವಂಡಿ: ವಿಶ್ವಕ್ಕೆ ಶಾಂತಿ-ಸೌಹಾರ್ದ ಸಂದೇಶ ನೀಡಿದ್ದು ಮುಹಮ್ಮದ್ ಪೈಗಂಬರರು ಎಂದು ಜನಾಬ ಮಹ್ಮದ್ ರಾಷಿದ ಖಾಜಿ ಗುರುಗಳು ತಿಳಿಸಿದರು.

ಗ್ರಾಮದಲ್ಲಿ ಅಂಜುಮನ್ ಇಸ್ಲಾಂ ಕಮಿಟಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಗುರುವಿನ ಗುಲಾಮರಾಗಿ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಗುರುಗಳ ಆರಾಧನೆ ಮಾಡಬೇಕು. ಸರ್ವಧರ್ಮದ ಆರಾಧನೆಯ ಮೂಲಕ ಸುಖಮಯ ಜೀವನ ನಮ್ಮದಾಗಿಸಿಕೊಳ್ಳಬೇಕು. ಪುಣ್ಯವಂತರ ನಾಡು ಭಾರತ. ಈ ನಾಡಲ್ಲಿ ಯಾವುದೇ ಜಾತಿ, ಭೇದ, ಭಾವ ಮಾಡದೆ ಎಲ್ಲರೂ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು ಎಂದರು.

ಜಿಪಂ ವಿರೋಧ ಪಕ್ಷದ ಮಾಜಿ ನಾಯಕ ಗುರುಮೂರ್ತಿಸ್ವಾಮಿ ಇನಾಮದಾರ ಮಾತನಾಡಿ, ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕಾಯಕ ಮಾಡುವ ವ್ಯಕ್ತಿಗೆ ದೇವರು ಯಾವಾಗಲೂ ಕರುಣಿಸುತ್ತಾನೆ. ನಮ್ಮ ಧರ್ಮ ಮತ್ತು ಆತ್ಮವನ್ನು ಶುದ್ಧೀಕರಿಸಬೇಕು. ಆಗ ಆರೋಗ್ಯಕರ ಜೀವನ ನಡೆಸಬಹುದು ಎಂದರು.ಬೆಳಗಟ್ಟಿ ಹಜರತ್ ಸೈಯದ ಶಾ ಮುಸ್ತಫಾ ಖಾದ್ರಿ ಗುರುಗಳು ಮಾತನಾಡಿದರು.

ಗ್ರಾಪಂ ಮಾಜಿ ಅಧ್ಯಕ್ಷ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರಮ್ಮ ಇಳಗೇರ, ನಗರಸಭೆ ಸದಸ್ಯ ಅಕ್ಬರ್ ಪಲ್ಟಾನ್, ಪ್ರಮುಖರಾದ ಡಾ. ಟಿ. ಎಚ್. ಮುಲ್ಲಾ, ಅನ್ವರ ಗಡಾದ, ಸುರೇಶ ದಾಸರಡ್ಡಿ, ನೀಲಪ್ಪ, ಹೊನ್ನಪ್ಪಗೌಡ, ಭರಮಪ್ಪ ನಗರ, ಬಸವರಡ್ಡೆಪ್ಪ ಹಳ್ಳಿಕೇರಿ, ಹನುಮಂತಗೌಡ, ರಂಗಪ್ಪ, ದೇವಪ್ಪ, ಮುಸ್ತಫಾ, ಮೆಹಬೂಬ, ಪಕೀರಸಾಬ್, ಮರ್ದಾನಸಾಬ್, ಮೈನುಸಾಬ, ನನ್ನುಸಾಬ, ನಜೀರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net