ಕಾನ್‌ಸ್ಟೇಬಲ್‌ಗೆ ಠಾಣೆಯಲ್ಲಿ ಸೀಮಂತ

02082021 Alavandi police station Seemanth program
Published on

ಅಳವಂಡಿ: ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸ್ ಠಾಣೆಯಲ್ಲಿ ಮಹಿಳಾ ಕಾನ್‌ಸ್ಟೇಬಲ್ ಶ್ವೇತಾಗೆ ಭಾನುವಾರ ಸೀಮಂತ ಕಾರ್ಯಕ್ರಮ ನಡೆಯಿತು.

ಸೀಮಂತ ಹಿನ್ನೆಲೆಯಲ್ಲಿ ಠಾಣೆಯಲ್ಲಿ ಹಬ್ಬದ ವಾತಾವರಣ ಕಂಡುಬಂತು. ಕೊಪ್ಪಳದ ಶ್ವೇತಾಗೆ ಗದಗ ಜಿಲ್ಲೆ ಮುಂಡರಗಿಯ ವರನೊಂದಿಗೆ ಮದುವೆಯಾಗಿದೆ. ಶ್ವೇತಾ ಪತಿ ಕೂಡ ಕಾನ್‌ಸ್ಟೇಬಲ್ ಆಗಿದ್ದು, ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ಸೀಮಂತ ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಪಿಎಸ್‌ಐ ವೀರೇಶ ಅಂಗಡಿ, ಎಎಸ್‌ಐಗಳಾದ ಬಸವರಾಜ ಸಜ್ಜನ್, ಬಸವರಾಜ ಉಪ್ಪಾರ,ನಿಲಕಂಠಪ್ಪ, ಸಿಬ್ಬಂದಿ ಮಾರುತಿ ಪೂಜಾರ, ಶರಣಪ್ಪ ಉಪ್ಪಾರ್, ಕನಕಪ್ಪ, ಗವಿಸಿದ್ದಪ್ಪ, ಚಂದ್ರು, ಈಶಪ್ಪ, ಗುರು ಬಸವರಾಜ, ಅಮರೇಗೌಡ, ಅರ್ಚನಾ ಹಾಗೂ ಅಳವಂಡಿ ಮತ್ತು ಕಂಪ್ಲಿ ಗ್ರಾಮಸ್ಥರಿದ್ದರು.

ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುಟುಂಬದವರಂತೆ ಸೀಮಂತ ಕಾರ್ಯಕ್ರಮ ಮಾಡಿದ್ದು ಸಂತೋಷವಾಗಿದೆ. ಇದೊಂದು ಮರೆಯಲಾಗದ ನೆನಪು.| ಶ್ವೇತಾ, ಅಳವಂಡಿ ಠಾಣೆಯ ಕಾನ್‌ಸ್ಟೇಬಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net