ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಲಿ

19ALD03
Published on

ಅಳವಂಡಿ: ಮಕ್ಕಳ ಹಕ್ಕುಗಳ ರಕ್ಷಣೆಗೆ ಅಗತ್ಯವಾದ ವಾತಾವರಣ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪಿಡಿಒ ಅನಿತಾ ಕಿಲ್ಲೇದ ಹೇಳಿದರು.

ಸಮೀಪದ ಕವಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (ಡಿಪಿಇಪಿ) ಜಿಪಂ, ತಾಪಂ ಕೊಪ್ಪಳ, ಗ್ರಾಮ ಪಂಚಾಯಿತಿ ಕವಲೂರು ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಮಕ್ಕಳು ಜವಾಬ್ದಾರಿಯನ್ನು ಅರಿತು ಓದಿ ಉತ್ತಮ ಸಂಸ್ಕಾರ, ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು. ಸಮಾಜಕ್ಕೆ ಒಳಿತನ್ನು ಮಾಡುವ ಗುಣಗಳನ್ನು ಬೆಳೆಸಿಕೊಳ್ಳಲಿ. ಶಾಲೆಗಳಿಗೆ ಬೇಕಾದ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಗ್ರಾಪಂ ಸಿದ್ಧವಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಬಿಸರಳ್ಳಿ, ಉಪಾಧ್ಯಕ್ಷೆ ಅನ್ನಪೂರ್ಣ ಪೂಜಾರ, ಪ್ರಮುಖರಾದ ಶರಣಪ್ಪ ಯರಾಶಿ, ಮುತ್ತಯ್ಯ ಲಿಂಬಿಕಾಯಿಮಠ, ಸಣ ್ಣಭರಮಪ್ಪ, ಅಶೋಕ ಕಾಳಿ, ಲಕ್ಷ್ಮಣ, ಅಶೋಕ ಬಾರಕೇರ, ಹನುಮಪ್ಪ ಬೀಳಗಿ, ಮಲ್ಲಣ್ಣ ಗೊರವರ, ಜಗದೀಶ ಪಟ್ಟಣಶೆಟ್ಟಿ, ಪ್ರಭು, ರಣದಪ್ಪ ಸುಂಕಣ್ಣವರ, ಮಹಾಲಿಂಗಪ್ಪ, ಯಶೋದಾ, ಗಣೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net