ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಅವಶ್ಯ

Alavandi Nutrition Abhiyan Program
ಅಳವಂಡಿಯಲ್ಲಿ ಹಮ್ಮಿಕೊಂಡಿದ್ದ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಲಾಯಿತು, ಪ್ರಮುಖರಾದ ಮರಿಬಸಮ್ಮ, ಮಲ್ಲಮ್ಮ, ದಾಕ್ಷಾಯಣಿ, ಖಾಜಾಮೈನುದ್ದೀನ, ಮಾಬೂಬಿ, ಶಕುಂತಲಾ, ಮಾದೇವಿ, ಜಾನಕಿ, ರೇಖಾ ಇತರರಿದ್ದರು.
Published on

ಅಳವಂಡಿ: ಪ್ರತಿಯೊಬ್ಬರ ಆರೋಗ್ಯದ ಗುಟ್ಟು ಪೌಷ್ಟಿಕ ಆಹಾರದಲ್ಲಿರುತ್ತದೆ ಎಂದು ಅಂಗನವಾಡಿ ಕಾರ್ಯಕರ್ತೆ ಮರಿಬಸಮ್ಮ ಕರ್ಕಿಹಳ್ಳಿ ತಿಳಿಸಿದರು. ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಷಣಾ ಅಭಿಯಾನ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಮಕ್ಕಳು. ಬಾಣತಿಯರು, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಅತಿ ಅವಶ್ಯ. ಪೌಷ್ಟಿಕ ಆಹಾರ ಸೇವನೆಯಿಂದ ರೋಗಗಳನ್ನು ದೂರಮಾಡಬಹುದು ಎಂದರು. ಎಂಬಿಕೆ ಮಲ್ಲಮ್ಮ ಭಾವಿಹಳ್ಳಿ, ಆಶಾ ಕಾರ್ಯಕರ್ತೆ ಶಕುಂತಲಾ ಹಳ್ಳಿಕೇರಿ ಮಾತನಾಡಿದರು. ನಂತರ ಗರ್ಭಿಣಿಯರಿಗೆ ಸೀಮಂತ ಹಾಗೂ ಮಕ್ಕಳಿಗೆ ಅನ್ನಪ್ರಾಷಣ ಕಾರ್ಯ ನಡೆಯಿತು. ಪ್ರಮುಖರಾದ ದಾಕ್ಷಾಯಿಣಿ, ನಂದ್ಯಾಳ, ಖಾಜಾ ಮೈನುದ್ದೀನ, ಮಾಬೂಬಿ ಬೆಟಗೇರಿ, ನತಿಶಾ, ಮಾದೇವಿ ಪಟ್ಟಣಶೆಟ್ಟಿ, ಜಾನಕಿ, ರೇಖಾ ಕಣವಿ, ಶಿವಲೀಲಾ ಇಟಗಿ, ಮಾಬೂಬಿ, ಪ್ರಿಯಾ, ಮೈಬೂದ, ಸುಶೀಲವ್ವ, ಲಕ್ಷ್ಮೀ, ಬಿಬಿಜಾನ, ಉಮಾ ಕರ್ಕಿಹಳ್ಳಿ, ವಿಜಯಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net