

ಅಳವಂಡಿ: ಸಮೀಪದ ನಿಲೋಗಿಪುರ ಗ್ರಾಮದ ಶರಣಬಸವೇಶ್ವರ ಪುರಾಣ ಮಹಾ ಮಂಗಲೋತ್ಸವ ಅಂಗವಾಗಿ ಗ್ರಾಮದ ಮಹಿಳೆಯರಿಂದ ಕುಂಭೋತ್ಸವ ಬುಧವಾರ ಅದ್ದೂರಿಯಾಗಿ ಜರುಗಿತು. ಮಹಿಳೆಯರ ಕುಂಭ, ಕಳಸ ಹಾಗೂ ಸ್ನೇಹ ಜೀವಿ ಬಳಗದ ಕೋಲಾಟ ಮೇಳದಿಂದ ಮೆರವಣಿಗೆಗೆ ಮೆರಗು ಬಂತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ಪ್ರಮುಖರಾದ ರಾಮನಗೌಡ್ರ, ಹನುಮಗೌಡ್ರ, ಮಹೇಶರಡ್ಡಿ, ಮುದಿಯಪ್ಪ, ಸ್ವಾಮಿ, ಪರಶುರಾಮ, ಶಿವಪ್ಪ, ಹನುಮಪ್ಪ, ಕೃಷ್ಣಪ್ಪ, ರಾಮಣ್ಣ, ಶರಣಪ್ಪ, ಶ್ರೀಕಾಂತ, ಹನುಮೇಶ ಇತರರಿದ್ದರು.