

ಅಳವಂಡಿ: ನವರಾತ್ರಿ ಪ್ರಯುಕ್ತ ಗ್ರಾಮದಲ್ಲಿ ಶ್ರೀದೇವಿ ಪುರಾಣ ಮಂಗಲ ಅಂಗವಾಗಿ ದೇವಿ ಭಾವಚಿತ್ರ ಮೆರವಣಿಗೆ ಶುಕ್ರವಾರ ಜರುಗಿತು.
ಇಲ್ಲಿನ ಆದಿಶಕ್ತಿ ದ್ಯಾಮಾಂಬಿಕೆ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ ಶ್ರೀದೇವಿ ಪುರಾಣ ಹಮ್ಮಿಕೊಳ್ಳಲಾಗಿತ್ತು. ಮಂಗಲ ಅಂಗವಾಗಿ ಬೆಳಗ್ಗೆ ದ್ಯಾಮಾಂಬಿಕೆ ಮೂರ್ತಿಗೆ ವಿಶೇಷ ಪೂಜೆ ಕಾರ್ಯ ನಡೆದವು. ನಂತರ ಮಹಿಳೆಯರ ಕಳಸ, ಕುಂಭದೊಂದಿಗೆ ಶ್ರೀದೇವಿ ಭಾವಚಿತ್ರ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನ ತಲುಪಿತು. ನಂತರ ದಾಸೋಹ ಸೇವೆ ನಡೆಯಿತು.
ಪ್ರಮುಖರಾದ ಸಿದ್ದಣ್ಣ ಕೋರಿಶೆಟ್ಟರ, ಭೀಮರೆಡ್ಡಿ ಗದ್ದಿಕೇರಿ, ದೇವಪ್ಪ ಕಟ್ಟಿಮನಿ, ಹನುಮರೆಡ್ಡಿ ನಾಗರಹಳ್ಳಿ, ಬಸವರೆಡ್ಡಿ ಹಳ್ಳಿಕೇರಿ, ಮಂಜುನಾಥಗೌಡ ಪಾಟೀಲ, ಹನುಮಂತ, ದೇವಪ್ಪ ಕಮ್ಮಾರ, ಮಾರುತಿ ಬಡಿಗೇರ, ಹುಸೇನಸಾಬ, ದ್ಯಾಮಣ್ಣ ಬಡಿಗೆರ, ಬಸಣ್ಣ, ಚಿದಾನಂದಪ್ಪ, ಮೌನೇಶ, ಅಶೋಕ, ಅನಿಲ, ಜಗದೀಶ, ಕೋಟೇಶ, ಸಂಜೀವ, ಮೌನೇಶ, ಬಸವರಾಜ, ಉಮೇಶ, ಆನಂದ ಇತರರಿದ್ದರು.