

ಅಳವಂಡಿ: ವಿಜ್ಞಾನ ಸತ್ಯದ ಮೇಲೆ ಬೆಳಕು ಚಲ್ಲುತ್ತದೆ. ಮೂಢನಂಬಿಕೆ, ಕಂದಾಚಾರಗಳ ಮೌಢ್ಯ ತೊಡೆದು ಹಾಕುತ್ತದೆ ಎಂದು ಮುಖ್ಯಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ಹೇಳಿದರು.
ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಮಕ್ಕಳು ಓದಿನ ಜತೆಗೆ ವಿವಿಧ ವಿಷಯಗಳನ್ನು ಪ್ರಯೋಗಗಳ ಮೂಲಕ ಅಭ್ಯಾಸಿಸುವುದನ್ನು ರೂಢಿಮಾಡಿಕೊಳ್ಳಬೇಕು. ಇದರಿಂದ ಮಾನಸಿಕ ವಿಕಸನ ಸಾಧ್ಯವಾಗುತ್ತದೆ ಎಂದರು.
ಶಿಕ್ಷಕರಾದ ಕೃಷ್ಣಪ್ಪ ತಳಕಲ್, ಮಲ್ಲಪ್ಪ ಕುರಿ, ಅಂದಪ್ಪ ಹಾರೋಗೇರಿ, ಹನುಮಂತಪ್ಪ ಕಟಾಂಬ್ಲಿ, ಆಶಾಬೀ ಹಡಗಲಿ, ವಿಜಯಲಕ್ಷ್ಮೀ ಮಳ್ಳಪ್ಪನವರ, ನೇತ್ರಾವತಿ ಆನಂದಳ್ಳಿ ಇತರರಿದ್ದರು.
ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಸಹಿಪ್ರಾ ಶಾಲೆಯಲ್ಲೂ ರಾಷ್ಟ್ರೀಯ ವಿಜ್ಞಾನ ದಿನ ನಿಮಿತ್ತ ಸರ್ ಸಿ.ವಿ.ರಾಮನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಮಕ್ಕಳಿಗೆ ರಾಕೆಟ್ ಉಡಾವಣೆ ಕುರಿತ ಮಾಹಿತಿ ನೀಡಲಾಯಿತು. ಮುಖ್ಯಶಿಕ್ಷಕ ಮಹಮದ್ ರಫಿ, ಶಿಕ್ಷಕರಾದ ಕಾವ್ಯಾ, ಗಂಗಮ್ಮ, ನೇತ್ರಾ ಹರ್ಲಾಪುರ, ಯಂಕರಡ್ಡಿ ಇತರರಿದ್ದರು.