ಜೀವನ ಮೌಲ್ಯ ತಿಳಿಸುವ ಪುರಾಣ

RASI KARYAKRAMA
ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಹೇಮರಡ್ಡಿ ಮಲ್ಲಮ್ಮ ಪುರಾಣ ನಿಮಿತ್ತ ರಾಶಿ ಮಾಡುವ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಬಸವಣ್ಣೆಯ್ಯ ಶಾಸ್ತ್ರಿ, ಮೃತ್ಯುಂಜಯ ಹಿರೇಮಠ, ಹೇಮಂತಕುಮಾರ, ಶಂಭುಲಿಂಗಯ್ಯ ಹಿರೇಮಠ, ನಾಗಪ್ಪ, ಚನ್ನಬಸಪ್ಪ, ದೇವರಡ್ಡಿ, ಗವಿಸಿದ್ದಪ್ಪ, ನಾಗರಾಜ, ಸಂಗಪ್ಪ, ರಾಜಪ್ಪ ಇತರರಿದ್ದರು.
Published on

ಅಳವಂಡಿ: ಪುರಾಣ ಪ್ರವಚನಗಳನ್ನು ಆಲಿಸುವುದರಿಂದ ಜೀವನದ ಹಾದಿ ಸುಗಮಗೊಳ್ಳುತ್ತದೆ ಎಂದು ಪ್ರವಚನಕಾರ ಬಸವಣ್ಣೆಯ್ಯ ಶಾಸ್ತ್ರಿ ತಿಳಿಸಿದರು.

ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಶ್ರೀ ಈಶ್ವರ ದೇವಸ್ಥಾನದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪುರಾಣ ನಿಮಿತ್ತ ಹಮ್ಮಿಕೊಂಡಿದ್ದ ರಾಶಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ಜನರು ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ತನು, ಮನ, ಧನದಿಂದ ಭಾಗವಹಿಸಬೇಕು. ಸಮಾಜದ ಕಾರ್ಯಗಳನ್ನು ಎಲ್ಲರೂ ಜೊತೆಯಾಗಿ ಆಚರಿಸಿಸಬೇಕು ಎಂದರು.

ಸಂಗೀತಕಾರ ಮೃತ್ಯುಂಜಯ ಹಿರೇಮಠ, ತಬಲಾ ವಾದಕ ಹೇಮಂತಕುಮಾರ, ಶ್ರೀ ಶಂಭುಲಿಂಗಯ್ಯ ಹಿರೇಮಠ, ನಾಗಪ್ಪ, ಚನ್ನಬಸಪ್ಪ, ದೇವರಡ್ಡಿ, ಗವಿಸಿದ್ದಪ್ಪ, ನಾಗರಾಜ, ಸಂಗಪ್ಪ, ರಾಜಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net