ಸ್ವಾವಲಂಬಿನೆಗಾಗಿ ಉದ್ಯಮ ತರಬೇತಿ ಅವಶ್ಯ

Untitled design(41)
ಮುರ್ಲಾಪುರ ಗ್ರಾಮದಲ್ಲಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಎರಡು ದಿನಗಳ ಉದ್ಯಮಶೀಲತಾ ಅರಿವು ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಗೀತಾ, ಪ್ರಿಯದರ್ಶಿನಿ, ವಿಜಯಲಕ್ಷ್ಮೀ, ಗವಿಸಿದ್ದಪ್ಪ, ಬಸನಗೌಡ ಇತರರಿದ್ದರು.
Published on

ಅಳವಂಡಿ: ಸಮೀಪದ ಮುರ್ಲಾಪುರ ಗ್ರಾಮದಲ್ಲಿ ಕೃಷಿ ಇಲಾಖೆ, ಜಲಾನಯನ ಇಲಾಖೆ, ಸ್ವರ್ಡ.ಕೆ.ಸಂಸ್ಥೆ, ಎಸ್‌ಬಿಐನ ಗ್ರಾಮೀಣ ಸ್ವಯಂ ಉದ್ಯೋಗ ಸಂಸ್ಥೆಯವತಿಯಿಂದ ಸ್ವಸಹಾಯ ಗುಂಪಿನ ಸದಸ್ಯರಿಗೆ ಎರಡು ದಿನಗಳ ಉದ್ಯಮಶೀಲತಾ ಅರಿವು ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಉಪನ್ಯಾಸಕಿ ಗೀತಾ ಮಾತನಾಡಿ, ಮಹಿಳೆಯರು ಸ್ವಾವಲಂಬಿಯಾಗಿ ಉದ್ಯಮ ಆರಂಭಿಸಿ ಆರ್ಥಿಕ ಸಬಲರಾಗಲಿ. ಗ್ರಾಮೀಣ ಮಹಿಳೆಯರು ತರಬೇತಿಯ ಸದುಪಯೋಗಪಡೆದುಕೊಳ್ಳಿ ಎಂದರು.

ಮಹಿಳಾ ಧ್ವನಿ ಸಂಸ್ಥೆಯ ಅಧ್ಯಕ್ಷೆ ಪ್ರಿಯದರ್ಶಿನಿ ಮಾತನಾಡಿ, ವಿವಿಧ ಕೌಶಲಗಳನ್ನು ಅಳವಡಿಸಿಕೊಂಡು ಉದ್ಯೋಗ ಮಾಡಿದರೆ ಆರ್ಥಿಕವಾಗಿ ಸಬಲತೆ ಹೊಂದಲು ಸಾಧ್ಯ. ಹಾಗಾಗಿ ಮಹಿಳೆಯರು ನೂತನ ತಾಂತ್ರಿಕತೆ ಅಳವಡಿಸಿಕೊಳ್ಳಲು ಮುಂದಾಗಲಿ ಎಂದರು. ಜಲಾನಯನ ಇಲಾಖೆಯ ಗವಿಸಿದ್ದಪ್ಪ ,ಬಸನಗೌಡ ಹಾಗೂ ಗ್ರಾಮದ ಮಹಿಳಾ ಸಂಘದ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net