ನೀರಾವರಿ ಯೋಜನೆಯಿಂದ ರೈತರಿಗೆ ಅನುಕೂಲ

Untitled design (1)
ಬೆಳಗಟ್ಟಿ ಗ್ರಾಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಶಿಗ್ಗಾಂವ-ಕಲ್ಮಲಾ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದರು. ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮುಖಂಡರಾದ ಕೃಷ್ಣರಡ್ಡಿ, ಭರಮಪ್ಪ, ಗಾಳೆಪ್ಪ, ಗುರು, ಅನ್ವರ ಇತರರಿದ್ದರು.
Published on

ಅಳವಂಡಿ: ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲಾಗುವುದು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ.

ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಅಳವಂಡಿಯ ಕಂಪ್ಲಿ ಕ್ರಾಸ್‌ನಿಂದ ಬೆಳಗಟ್ಟಿಯವರೆಗೆ (ಕಲ್ಮಲಾ-ಶಿಗ್ಗಾಂವ) ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು. ಸಿಂಗಟಾಲೂರು ಏತ ನೀರಾವರಿ ಯೋಜನೆ, ಅಳವಂಡಿ-ಬೆಟಗೇರಿ ಏತ ನೀರಾವರಿ, ನವಲಕಲ್ ಏತ ನೀರಾವರಿಗಳಿಂದ ರೈತರಿಗೆ ಅನುಕೂಲವಾಗಲಿದೆ. ಅಳವಂಡಿ ಭಾಗದ ಶೈಕ್ಷಣಿಕ ಸುಧಾರಣೆಗೆ ಎರಡು ಹೊಸ ವಸತಿ ನಿಲಯ ಮಂಜೂರು ಮಾಡಲಾಗಿದೆ ಎಂದರು.

ನಿಲೋಗಿಪುರ, ಕೇಸಲಾಪುರದ ಹತ್ತಿರ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗುವುದು. 22 ಕೋಟಿ ರೂ ವೆಚ್ಚದಲ್ಲಿ ಈ ಭಾಗದ ಕೆರೆ ತುಂಬಿಸಲು ಕ್ರಮ ಕೈಕೊಳ್ಳಲಾಗುತ್ತಿದೆ. ಇದರಿಂದ ಕೃಷಿಗೆ ಅನುಕೂಲ ಜತೆಗೆ ಅಂತರ್ಜಲ ಮಟ್ಟ ಹೆಚ್ಚಲಿದೆ ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಕಲ್ಮಲಾ-ಶಿಗ್ಗಂವ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಕಳಿಸಲಾಗಿದೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೆಲ ರೈತರು ಭೂಮಿಯನ್ನು ಸೋಲಾರ್ ಹಾಗೂ ಗಾಳಿ ವಿದ್ಯುತ್ ಕಂಪನಿಗಳಿಗೆ ನೀಡುತ್ತಿದ್ದಾರೆ. ಇದು ನಿಲ್ಲಬೇಕು. ಭೂಮಿ ಹೆತ್ತ ತಾಯಿ ಇದ್ದಂತೆ. ಜೀವನ ಕಟ್ಟಿಕೊಳ್ಳಲು ಭೂಮಿ ಸಹಕಾರಿಯಾಗಲಿದೆ. ರೈತರು ನೂತನ ತಂತ್ರಜ್ಞಾನ ಬಳಸಿಕೊಂಡು ವಿವಿಧ ತೋಟಗಾರಿಕೆ ಬೆಳೆಗಳಿಂದ ಸಬಲರಾಗಬೇಕು ಎಂದರು.

ಬೆಳಗಟ್ಟಿ ಧರ್ಮ ಗುರು ಮುಸ್ತಫಾ ಖಾದ್ರಿ , ತಹಸೀಲ್ದಾರ್ ವಿಠ್ಠಲ ಚೌಗಲೆ, ಮುಖಂಡರಾದ ಕೃಷ್ಣರಡ್ಡಿ ಗಲಬಿ, ಭರಮಪ್ಪ ನಗರ, ಗಾಳೆಪ್ಪ ಪೂಜಾರ, ಅನ್ವರ ಗಡಾದ, ಗುರುಬಸವರಾಜ ಹಳ್ಳಿಕೇರಿ, ರಾಮಣ್ಣ ಚೌಡಕಿ, ಚೌಡಪ್ಪ ಜಂತ್ಲಿ, ನೀಲಪ್ಪ, ಸೈಯದ್, ಬೀಮೇಶಪ್ಪ, ಸಲಿಂ ಅಳವಂಡಿ, ತೋಟಪ್ಪ, ಹೊನ್ನಪ್ಪಗೌಡ, ಮಂಜುನಾಥ, ಭಾಗ್ಯಶ್ರೀ, ವಿಷ್ಣು, ಅರವಿಂದಪ್ಪ, ಅಂದಾನಗೌಡ, ಮಲ್ಲಪ್ಪ, ಮಹಾಂತೇಶ, ಮುತ್ತಣ್ಣ, ಚನ್ನಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net