

ಅಳವಂಡಿ: ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ದೇವಿಯ ಕಡೆ ಮಂಗಳವಾರ ಅಂಗವಾಗಿ ಭೂತಾಯಿ ಮಡಿಲಿಗೆ ಹಾಲು ಏರೆಯುವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಯುಗಾದಿ ಪಾಡ್ಯದಿಂದ ಈವರೆಗೆ ಅಂದರೆ ಐದು ಮಂಗಳವಾರ ದೇವಿ ಆರಾಧನೆ ಮಾಡಲಾಯಿತು. ಐದನೇ ಮಂಗಳವಾರ ಗ್ರಾಮಸ್ಥರೆಲ್ಲರೂ ಶ್ರೀ ದ್ಯಾಮಂಬಿಕಾ ದೇವಸ್ಥಾನದಿಂದ ಭೂತಾಯಿ ಮಡಿಲಿಗೆ ಹಾಲು ಏರೆಯುವ ಕಾರ್ಯ ನೆರವೇರಿಸಿದರು.
ಸಮೃದ್ಧ ಮಳೆ-ಬೆಳೆ ಆಗಲದೆಂದು ಪ್ರಾರ್ಥನೆ ಸಲ್ಲಿಸಿದರು. ನಂತರ ಗ್ರಾಮಸ್ಥರಿಂದ ದೇವಿಗೆ ವಿಶೇಷ ಪೂಜೆ, ಉಡಿ ತುಂಬುವ ಕಾರ್ಯ ನಡೆಯಿತು.