ಎಲ್ಲರ ಅಭಿವೃದ್ಧಿಗಾಗಿ ಸಂಸ್ಥೆ ಬದ್ಧ

Untitled design121
ಅಳವಂಡಿಯಲ್ಲಿ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮರುಳಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಪ್ರಮುಖರಾದ ಸದಾನಂದ ಬಂಗೇರ, ಜಗದೀಶ, ಶಂಕ್ರಮ್ಮ, ಮೋಟಯ್ಯ, ಮಲ್ಲಾರಭಟ್ ಜೋಶಿ, ತಿಪ್ಪಣ್ಣಬಟ್, ಗುರುಮೂತಿಸ್ವಾಮಿ, ಶಂಕ್ರಮ್ಮ ಇತರರಿದ್ದರು.
Published on

ಅಳವಂಡಿ: ಎಲ್ಲರನ್ನು ಸ್ವಾವಲಂಬಿ ಬದುಕು ಕಟ್ಟಿಕೊಡಲು ಸಂಸ್ಥೆ ಶ್ರಮಿಸುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ತಿಳಿಸಿದರು.

ಸಾಮಾಜಿಕ ಕಾರ್ಯದಲ್ಲಿ ನಿರತ

ಗ್ರಾಮದ ಸಿದ್ಧೇಶ್ವರ ಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಕೊಪ್ಪಳ ಪಶ್ಚಿಮ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಅಳವಂಡಿ ಜಂಟಿಯಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಸಂಸ್ಥೆಯು ಮಹಿಳಾ ಸಂಘಗಳಿಗೆ ಕೇವಲ ಸಾಲ ನೀಡುತ್ತಿಲ್ಲ. ಜತೆಗೆ ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಶಾಲೆಗಳ ಅಭಿವೃದ್ದಿ, ಹೈನುಗಾರಿಕೆ ನೆರವು, ಶುದ್ಧ ಕುಡಿಯುವ ನೀರಿನ ಘಟಕ , ಕೃಷಿ, ತೋಟಗಾರಿಕೆ, ದೇವಸ್ಥಾನ, ಕಲೆ-ಸಂಸ್ಕೃತಿ ಬೆಳೆಸಲು, ಬೀಜದುಂಡೆ ತಯಾರಿಕೆ, ಕೌಶಲಧಾರಿತ ತರಬೇತಿಗೆ ಸೇರಿ ವಿವಿಧ ಚಟುವಟಿಕೆಗಳಿಗೆ ಒತ್ತನ್ನು ನೀಡಿದೆ. ಈ ಕಾರ್ಯಗಳಿಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ನೆರವು ಇದೆ. ಸರ್ವರ ಒಳಿತಾಗಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿದೆ ಎಂದರು.

ಉದ್ಘಾಟಿಸಿ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ಸರ್ವರ ಏಳಿಗೆಗೆ ಧರ್ಮಸ್ಥಳ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಲಕ್ಷಾಂತರ ಮಹಿಳೆಯರು ಹಾಗೂ ಸಂಘಗಳು ಪ್ರಯೋಜನ ಪಡೆದು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗಿದ್ದಾರೆ. ಫೆಬ್ರವರಿ ನಡೆಯುವ ಸಿದ್ಧೇಶ್ವರನ ಜಾತ್ರೆಯನ್ನು ಎಲ್ಲರೂ ಒಗ್ಗಟ್ಟನಿಂದ ಅದ್ದೂರಿಯಾಗಿ ಆಚರಿಸೋಣ ಎಂದರು.

ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಉಪಾಧ್ಯಕ್ಷೆ ಶಾರವ್ವ, ತಾ,ಯೋಜನಾಧಿಕಾರಿ ಕೆ.ಎಚ್.ಜಗದೀಶ, ಮೇಲ್ವಿಚಾರಕ ಮೋಟಯ್ಯ, ಪ್ರಮುಖರಾದ ಗುರುಮೂರ್ತಿಸ್ವಾಮಿ, ಸುನೀಲ ಐಹೊಳೆ, ಚೌಡಪ್ಪ ಜಂತ್ಲಿ, ಹನುಮಂತಗೌಡ್ರ, ರಂಗಪ್ಪ, ಬೀಮರಡ್ಡಿ, ವಸಂತ ನಾಗರಳ್ಳಿ, ಗುರುಬಸವರಾಜ, ಮಂಜುನಾಥ ಬೆದವಟ್ಟಿ, ದೇವಪ್ಪ ಕಟ್ಟಿಮನಿ, ಶಂಕ್ರಪ್ಪ, ರಾಮಣ್ಣ, ಮಲ್ಲಾರಭಟ್ ಜೋಶಿ, ತಿಪ್ಪಣ್ಣ ಭಟ್ ಜೋಶಿ, ಶ್ರೀದೇವಿ, ಬಸಮ್ಮ, ಅಕ್ಕಮಹಾದೇವಿ, ಪ್ರವೀಣಕುಮಾರ, ನೇತ್ರಾವತಿ, ಸವಿತಾ, ಹನುಮವ್ವ, ಶೋಭಾ, ಬಸಮ್ಮ, ಸುಧಾ, ನಿಂಗಪ್ಪ, ಪುಷ್ಪಾವತಿ, ಮಾರುತೇಶ, ಹನುಮವ್ವ, ಮಂಜುಳಾ, ಯಶೋಧಾ, ಪ್ರದೀಪ, ಭಾರತಿ, ರೇಣುಕಾ, ಶಿವಮ್ಮ ಹಾಗೂ ಸಂಘದ ಸದಸ್ಯೆಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net