ಪರಿಸರ ಜಾಗೃತಿ ಎಲ್ಲರಲ್ಲೂ ಮೂಡಲಿ

Alavandi Parisara jagruti
ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಮರುಳಾರಾಧ್ಯ ಶಿವಾಚಾರ್ಯರು, ಪ್ರಮುಖರಾದ ಜಗದೀಶ, ಗುರನಗೌಡ, ಪ್ರತಾಪ, ಹನುಮಂತಪ್ಪ, ನಜರುದ್ದೀನ, ರವಿ, ಮಂಜುನಾಥ, ರಾಜು ಇತರರಿದ್ದರು.
Published on

ಅಳವಂಡಿ: ಹಸಿರೇ ಭೂಮಿ ತಾಯಿಯ ಉಸಿರಾಗಿದೆ. ಪರಿಸರ ಮನುಷ್ಯ ಜೀವಿಸಲು ಎಲ್ಲವನ್ನು ಕೊಟ್ಟಿದೆ ಎಂದು ಮರುಳಾರಾಧ್ಯ ಶಿವಾಚಾರ್ಯರು ಹೇಳಿದರು.

ಗ್ರಾಮದ ಶ್ರೀಶಿವಮೂರ್ತಿಸ್ವಾಮಿ ಇನಾಮದಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಗಿಲ್ ಮಲ್ಲಯ್ಯ ಅಭಿಮಾನಿ ಬಳಗ ಹಾಗೂ ಯುವಕರವತಿಯಂದ ಹಮ್ಮಿಕೊಂಡಿದ್ದ ಸಾವಿರ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು. ಪರಿಸರದ ಜತೆಗೆ ಬೆಳೆದು ಬಾಳುವ ಗುಣ ಬೆಳೆಸಿಕೊಳ್ಳಬೇಕು. ಇದರಿಂದ ಪರಿಸರದ ಹಾನಿ ತಪ್ಪಲಿದೆ. ಕಾರಣ ಎಲ್ಲರೂ ಗಿಡ ನೆಟ್ಟು ಬೆಳೆಸಬೇಕು ಎಂದರು.

ಆರೋಗ್ಯಕರ ಜೀವನಕ್ಕೆ ಶುದ್ಧ ಪರಿಸರ ಅವಶ್ಯ. ವ್ಯಕ್ತಿಯ ದೈಹಿಕ, ಸಾಮಾಜಿಕ, ಮಾನಸಿಕ ಅಂಶಗಳು ಉತ್ತಮ ಪರಿಸರದಲ್ಲಿ ಅಡಗಿವೆ. ಜೀವನದಲ್ಲಿ ಸ್ವಚ್ಛತೆ ಹಾಗೂ ಶುದ್ಧತೆಯನ್ನು ಅಳ ವಡಿಸಿಕೊಳ್ಳಬೇಕು. ಪರಿಸರ ಜಾಗೃತಿ ಎಲ್ಲರಲ್ಲೂ ಮೂಡಲಿ ಎಂದರು.

ಆರ್‌ಎಫ್‌ಒ ಗುರನಗೌಡ ಪಾಟೀಲ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ವಿದ್ಯಾರ್ಥಿಗಳು, ಸಾರ್ವಜನಿಕರು, ಸಂಘಟನೆಗಳ ಜತೆ ಕೈಜೋಡಿಸಬೇಕು ಹಾಗೂ ಪರಿಸರ ಜಾಗೃತಿ

ಮೂಡಿಸುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಪರಿಸರದ ಹಾನಿ ತಪ್ಪಲಿದೆ ಎಂದರು.

ಪ್ರಾಚಾರ್ಯ ಜಗದೀಶ ಆಲದಕಟ್ಟಿ, ಪ್ರಮುಖರಾದ ಹನುಮಂತಪ್ಪ ಗುಡಿ, ನಜರುದ್ದೀನ, ಪ್ರತಾಪ ಭಾವಿಹಳ್ಳಿ, ರವಿ ಸುಣಗಾರ, ಮಂಜುನಾಥ ಹಳ್ಳಿಕೇರಿ, ಹನುಮಂತಪ್ಪ ಇಟಗಿ, ಭರಮಪ್ಪ, ರಪೀ ಹಳ್ಳಿಕೇರಿ, ಮಂಜುನಾಥ ಗಾಳಿ, ಮಂಜುನಾಥ ಜಾಣಗಾರ, ಕೊಟ್ರೇಶ ಕವಡಿಮಟ್ಟಿ, ಜಗದೀಶ ಅರ್ಕಸಾಲಿ, ರವಿ ಜೋಗಿನ, ಪ್ರಶಾಂತ ಆರೇರ್, ರಾಜು ಗ್ಯಾನಪ್ಪನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net