ಮರಿಶಾಂತವೀರಸ್ವಾಮಿಗೆ ಒಲಿದ ಅದೃಷ್ಟ: ಲಾಟರಿ ಎತ್ತಿ ಬಿಸರಹಳ್ಳಿ ಗ್ರಾಪಂಗೆ ಅಧ್ಯಕ್ಷರ ಆಯ್ಕೆ

10062022 Alavandi GP election
Published on

ಅಳವಂಡಿ: ಸಕ್ರಡ್ಡಿ ಹ್ಯಾಟಿ, ನೀಲವ್ವ ಕೊರವರ ರಾಜೀನಾಮೆಯಿಂದ ತೆರವಾದ ಬಿಸರಹಳ್ಳಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದ್ದು, ಬಿಜೆಪಿ ಬೆಂಬಲಿತರು ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಮೈನಳ್ಳಿಯ ಮರಿಶಾಂತವೀರಸ್ವಾಮಿ ಚಕ್ಕಡಿ ಹಾಗೂ ಬಿಸರಹಳ್ಳಿಯ ರವೀಂದ್ರಗೌಡ ಮಾಲಿಪಾಟೀಲ್, ಉಪಾಧ್ಯಕ್ಷ ಸ್ಥಾನಕ್ಕೆ ಲಲಿತವ್ವ ಸಿಂಧೋಗಿ ಹಾಗೂ ನೀಲವ್ವ ಕೊರವರ ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಸ್ಥಾನದ ಇಬ್ಬರೂ ಅಭ್ಯರ್ಥಿಗಳು ತಲಾ 9 ಮತಗಳನ್ನು ಪಡೆದಿದ್ದರಿಂದ ಅವರ ಹೆಸರು ಬರೆದು ಲಾಟರಿ ಎತ್ತಲಾಯಿತು. ಈ ವೇಳೆ ಮರಿಶಾಂತವೀರಸ್ವಾಮಿಗೆ ಅದೃಷ್ಟ ಒಲಿದು ಅಧ್ಯಕ್ಷರಾಗಿ ಆಯ್ಕೆಯಾದರು.

ಲಲಿತವ್ವ ಸಿಂಧೋಗಿ 10 ಮತ ಪಡೆದು ಉಪಾಧ್ಯಕ್ಷೆಯಾದರು. ತಹಸೀಲ್ದಾರ್ ವಿಠ್ಠಲ ಚೌಗಲೆ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಕೊಪ್ಪಳ ಸಿಪಿಐ ವಿಶ್ವನಾಥ ಹಿರೇಗೌಡ್ರ, ಅಳವಂಡಿ ಪಿಎಸ್‌ಐ ಮಾತಾಂಡಪ್ಪ ಹಾಗೂ ಸಿಬ್ಬಂದಿ ಬಂದೋಬಸ್ತ್ ಒದಗಿಸಿದ್ದರು. ಕಂದಾಯ ನಿರೀಕ್ಷಕ ಬಸವರಾಜ ಬನ್ನಿಕಪ್ಪ, ಗ್ರಾಮ ಲೆಕ್ಕಾಧಿಕಾರಿ ಸಿದ್ದೇಶ, ಪಿಡಿಒ ಶಿವಕುಮಾರ ಮಳಿಮಠ, ಕಾರ್ಯದರ್ಶಿ ಅಜಿತಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net