ಮಾರುಕಟ್ಟೆ ಸೌಲಭ್ಯಕ್ಕೆ ದೀಪ ಸಂಜೀವಿನಿ ಸಹಕಾರಿ

Deepa Sanjeevini program
ಅಳವಂಡಿಯಲ್ಲಿ ಸಂಜೀವಿನಿ ಒಕ್ಕೂಟ ಹಮ್ಮಿಕೊಂಡಿದ್ದ ದೀಪ ಸಂಜೀವಿನಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.ಪ್ರಮುಖರಾದ ಗೀತಾ, ಕೊಟ್ರಪ್ಪ, ಜಗದೀಶ್ವರಿ, ವಾಣಿ, ಶಶಿಕಲಾ ಇತರರಿದ್ದರು.
Published on

ಅಳವಂಡಿ: ಗ್ರಾಮೀಣ ಭಾಗದ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ಸಲುವಾಗಿ ದೀಪ ಸಂಜೀವಿನಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎನ್‌ಆರ್‌ಎಲ್‌ಎಂ ವಲಯ ಮೇಲ್ವಿಚಾರಕ ವೀರಣ್ಣ ತಿಳಿಸಿದರು.

ಗ್ರಾಮದಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಬಾಂಧವ್ಯ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟ ಅಳವಂಡಿ ವತಿಯಿಂದ ನಡೆದ ದೀಪ ಸಂಜೀವಿನಿ ಕಾರ್ಯಕ್ರಮ ಉದ್ದೇಶಿಸಿ ಗುರುವಾರ ಮಾತನಾಡಿದರು. ಈ ಬಾರಿಯ ದೀಪಾವಳಿ ಹಬ್ಬವನ್ನು ಮಣ್ಣಿನ ಹಣತೆ ಬೆಳಗುವ ಮೂಲಕ ಆಚರಿಸೋಣ ಎಂದರು.

ಪಿಡಿಒ ಕೊಟ್ರಪ್ಪ ಅಂಗಡಿ ಮಾತನಾಡಿ, ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲತೆಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳು ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಪಂ ಪಿಡಿಒ ಗೀತಾ, ಗ್ರಾಪಂ ಸದಸ್ಯೆ ಶಶಿಕಲಾ ನಾಗರಹಳ್ಳಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಜಗದೀಶ್ವರಿ ಜಾಣಗಾರ, ಸದಸ್ಯರಾದ ಬಸಮ್ಮ ತವದಿ, ವಾಣಿ, ಯಶೋಧಾ, ಖಾತನಭಿ, ಅಶ್ವಿನಿ, ಬಸವಣ್ಣಮ್ಮ, ರಜಿಯಾ, ಸಂಜೀವಿನಿ ಯೋಜನೆ ಸಿಬ್ಬಂದಿ ಮಲ್ಲಮ್ಮ, ಗೀತಾ, ಸಲ್ಮಾ, ಕಾವೇರಿ, ಕಾಳಮ್ಮ, ಪ್ರತಿಭಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net