ಮೇಲು-ಕೀಳುಗಳ ಬಗ್ಗೆ ಜನ ಜಾಗೃತಿ

Alavandi Vemana Jayanti
ಅಳವಂಡಿಯಲ್ಲಿ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದಿಂದ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು. ಪ್ರಮುಖರಾದ ವೆಂಕರಡ್ಡಿ, ಗುರುಬಸವರಾಜ, ಸುರೇಶ, ಹನುಮರಡ್ಡಿ, ಮಂಜುನಾಥಗೌಡ, ಭೀಮರಡ್ಡಿ, ಶ್ರೀನಿವಾಸ ಇತರರಿದ್ದರು.
Published on

ಅಳವಂಡಿ: ಮಹಾಯೋಗಿ ವೇಮನರ ವಚನಗಳು ಸತ್ಯ, ನಿಷ್ಠೆ ಪ್ರತಿಪಾದಿಸುತ್ತವೆ. ಇವರ ಆದರ್ಶಗಳನ್ನು ಸರ್ವರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕರಡ್ಡಿ ಕಲಾದಗಿ ತಿಳಿಸಿದರು.

ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಸಾಮಾನ್ಯರ ಕವಿಯಾಗಿ ಹೆಸರು ವಾಸಿಯಾಗಿದ್ದ ವೇಮನರು ಜಾತೀಯತೆ, ಅಂಧಶ್ರದ್ಧೆ, ಮೇಲು-ಕೀಳುಗಳ ಬಗ್ಗೆ ಜನ ಜಾಗೃತಿ ಮೂಡಿಸಿದ್ದಾರೆ. ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದು ಜಾತಿ ಪದ್ಧತಿ ಧಿಕ್ಕರಿಸಿದ ಆದರ್ಶಪ್ರಾಯರಾಗಿದ್ದಾರೆ ಎಂದರು.

ಮಹಾಯೋಗಿ ವೇಮನ ಹಾಗೂ ಹೇಮರಡ್ಡಿ ಮಲ್ಲಮ್ಮಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ಅನ್ನ ಸಂತರ್ಪಣೆ ಮಾಡಲಾಯಿತು. ಪ್ರಮುಖರಾದ ಭೀಮರಡ್ಡಿ, ಶ್ರೀನಿವಾಸ, ಮಂಜುನಾಥಗೌಡ, ಗುರುಬಸವರಾಜ, ಸುರೇಶ ದಾಸರಡ್ಡಿ, ಉಮೇಶಗೌಡ, ಅಂದಪ್ಪ, ವಸಂತರಡ್ಡಿ, ದೇವೇಂದ್ರರಡ್ಡಿ, ಗೋವಿಂದರಡ್ಡಿ, ಹನುಮರಡ್ಡಿ, ವಿಲಾಸ, ಮಲ್ಲಿಕಾರ್ಜುನ, ಸೋಮರಡ್ಡಿ, ಪ್ರಕಾಶರಡ್ಡಿ, ಮಂಜುನಾಥರಡ್ಡಿ, ಪ್ರಭುರಡ್ಡಿ, ರಾಮರಡ್ಡಿ, ಹನುಮರಡ್ಡಿ, ಪದ್ಮರಡ್ಡಿ, ದೇವರಡ್ಡಿ, ಶಿವರಡ್ಡಿ, ಹೇಮರಡ್ಡಿ, ರಾಕೇಶ, ಯಶ್ವಂತರಡ್ಡಿ, ಪರಪ್ಪ, ದೇವಯ್ಯ, ಗುಡದಪ್ಪ, ಹೇಮರಡ್ಡಿ, ಸಂಜೀವರಡ್ಡಿ, ನಿಂಗಜ್ಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net