

ಅಳವಂಡಿ: ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಲೋಕ ಕಲ್ಯಾಣಾರ್ಥ ಮಳೆಮಲ್ಲಪ್ಪಗೆ ವಿಶೇಷ ಪೂಜೆ ಶುಕ್ರವಾರ ನೆರವೇರಿಸಲಾಯಿತು.
ಗ್ರಾಮ ಹೊರವಲಯದ ಗಂಗಮ್ಮನ ಕೆರೆ ಬಳಿ ಮಲ್ಲಪ್ಪನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ಗಂಗಾಮಾತೆಗೆ ಪೂಜೆ ನೆರವೇರಿಸಿ ಸಮೃದ್ಧ ಮಳೆ-ಬೆಳೆಗಾಗಿ ಪ್ರಾರ್ಥಿಸಲಾಯಿತು.
ಗ್ರಾಮದ ಭಕ್ತರಿಂದ ಸಂಗ್ರಹಿಸಿದ ಜೋಳದ ಸಂಗಟಿ ಮತ್ತು ಸಾಂಬರನ್ನು ನೈವೇದ್ಯ ಮಾಡಲಾಯಿತು. ಬಳಿಕ ದಾಸೋಹ ಸೇವೆ ನಡೆಯಿತು.