ಕುಷ್ಠಮುಕ್ತ ಭಾರತ ಸರ್ಕಾರದ ಸಂಕಲ್ಪ

Alavandi
ಅಳವಂಡಿ ಗ್ರಾಪಂ ಕಚೇರಿ ಆವರಣದಲ್ಲಿ ಕುಷ್ಠ ರೋಗ ಪತ್ತೆ ಸಮೀಕ್ಷೆಗೆ ಬುಧವಾರ ಚಾಲನೆ ನೀಡಲಾಯಿತು.
Published on

ಅಳವಂಡಿ: ದೇಶವನ್ನು ಕುಷ್ಠಮುಕ್ತ ಮಾಡುವುದಕ್ಕಾಗಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದು, ಸಮರ್ಪಕ ಮಾಹಿತಿ ನೀಡಿ ಸಹಕರಿಸಬೇಕೆಂದು ಪಿಡಿಒ ಕೊಟ್ರಪ್ಪ ಅಂಗಡಿ ತಿಳಿಸಿದರು.

ಗ್ರಾಪಂ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಕುಷ್ಠ ರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಚಾಲನೆ ನೀಡಿ ಬುಧವಾರ ಮಾತನಾಡಿದರು. ಕುಷ್ಠಮುಕ್ತ ಭಾರತ ಸರ್ಕಾರದ ಸಂಕಲ್ಪವಾಗಿದೆ. ಕುಷ್ಠರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ಔಷಧ ನೀಡಲಾಗುತ್ತದೆ ಎಂದರು.

ಹಿರಿಯ ಆರೋಗ್ಯ ಸಹಾಯಕ ರವೀಂದ್ರ ಕಮ್ಮಾರ ಮಾತನಾಡಿ, ದೇಹದ ಯಾವುದೇ ಭಾಗದಲ್ಲಿ ತಾಮ್ರ ಅಥವಾ ಬಿಳಿ ಬಣ್ಣದ ಮಚ್ಛೆ ಇದ್ದು, ಸ್ಪರ್ಶ ಜ್ಞಾನ ಇಲ್ಲದಿದ್ದಲ್ಲಿ, ಪಾದಗಳು, ಬೆರಳುಗಳು ದುರ್ಬಲವಾಗಿದ್ದಲ್ಲಿ, ಕಣ್ಣುಗಳು ಮುಚ್ಚಲು ತೊಂದರೆಯಾಗುತ್ತಿದ್ದರೆ, ನಡೆಯುವಾಗ ಕಾಲು ಎಳೆಯುವುದು, ಅಂಗೈ ಅಥವಾ ಪಾದಗಳಲ್ಲಿ ಶೀತ, ಬಿಸಿ ಸಂವೇದನೆ ಇಲ್ಲದಿರುವುದು ಕುಷ್ಠದ ಲಕ್ಷಣವಾಗಿವೆ.

ಈ ಲಕ್ಷಣಗಳು ಕಂಡು ಬಂದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಬೇಕೆಂದರು. ಆರೋಗ್ಯ ಇಲಾಖೆಯ ಸ್ವಯಂ ಸೇವಕ ಶಬ್ಬೀರ್ ಬಾಷಾ, ಗ್ರಾಪಂ ಸಿಬ್ಬಂದಿ ದೇವೇಂದ್ರರಡ್ಡಿ, ಶಿವಮೂರ್ತಿ, ದಾವಲ್‌ಸಾಬ್, ಮಾರುತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net