ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ

Untitled design (17)
Published on

ಅಳವಂಡಿ: ಮಕ್ಕಳು ಶಿಕ್ಷಣದ ಜತೆಗೆ ಸಂಸ್ಕಾರ ಕಲಿಯಬೇಕು. ವಿದ್ಯಾರ್ಥಿ ಜೀವನವನ್ನು ಓದಿಗೆ ಮಾತ್ರ ಮೀಸಲಿಡಬೇಕು. ತಂದೆ-ತಾಯಿ, ಶಿಕ್ಷಕರ ಮಾರ್ಗದರ್ಶನದಲ್ಲಿ ಮುನ್ನೆಡೆಯಬೇಕು ಎಂದು ವಕೀಲ ಶಿವಪ್ರಸಾದ ಹಾರೋಗೇರಿ ಹೇಳಿದರು.

ಸಮೀಪದ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಶನಿವಾರ ಮಾತನಾಡಿದರು. ಪಾಲಕರ ಕನಸನ್ನು ನನಸು ಮಾಡಬೇಕು. ಮೊಬೈಲ್ ಉಪಯೋಗದಿಂದ ಹಾಗೂ ಅಲ್ಪ ತೃಪ್ತಿಯಿಂದ ಜೀವನ ಹಾಳು ಮಾಡಿಕೊಳ್ಳದೇ ಶಿಕ್ಷಣಕ್ಕೆ ಒತ್ತು ನೀಡಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಾವುದೇ ರೀತಿ ಭಯ ಪಡದೇ ಧೈರ್ಯವಾಗಿ ಎದುರಿಸುವಂತೆ ಸಲಹೆ ನೀಡಿದರು.

ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಹಾಗೂ ಆದರ್ಶ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ದೇವಪ್ಪ ತಳವಾರ, ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ, ಪ್ರಮುಖರಾದ ಹೇಮಣ್ಣ ಕವಲೂರು, ಸುರೇಶ , ಜುನಸಾಬ, ಎಸ್ಡಿಎಂಸಿಯ ಸಿದ್ದಮ್ಮ, ಅನ್ನಪೂರ್ಣ, ಸುಧಾ ಪಾತ್ರದ, ಅಲ್ಲಾಸಾಬ ನದಾಫ್, ಶಿವಪುತ್ರಪ್ಪ , ಗುರುಮೂರ್ತಿಸ್ವಾಮಿ, ಬಸವರಾಜ, ದುರಗಪ್ಪ, ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ, ರವಿಕಿರಣ ಟಿಕಾರೆ, ಮರ್ದಾನಲಿ ಗಡಾದ, ರಾಜಸಾಹೇಬ್ ಬಳಿಗಾರ, ನಾರಾಯಣಪ್ಪ, ಬಸಮ್ಮ, ಸುನೀತಾ, ಶ್ವೇತಾ, ಸೋಮಣ್ಣ, ಸೌಮ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net