ಪರಿಸರ ಇಲ್ಲದೆ ಬದುಕಿಲ್ಲ, ಜಿಲ್ಲಾ ನಿರ್ದೇಶಕ ಪ್ರಕಾಶರಾವ್ ತಿಳಿಸಿದರು.

lake yard planting
ಅಳವಂಡಿ ಸಮೀಪದ ಬೆಟಗೇರಿ ಕೆರೆ ದಂಡೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆರೆಯಂಗಳದಿ ಗಿಡ ನಾಟಿ ಕಾರ್ಯಕ್ರಮದಡಿ ಗಿಡ ನೆಡಲಾಯಿತು. ಪ್ರಮುಖರಾದ ಪ್ರಕಾಶರಾವ್, ಜಗದೀಶ, ಸತೀಶ, ವೀರೇಶ, ಅಂದಾನಸ್ವಾಮಿ, ಶಂಕ್ರಪ್ಪ, ಶರಣಪ್ಪ ಇತರರು ಇದ್ದರು.
Published on

ಅಳವಂಡಿ: ಸಕಲ ಜೀವರಾಶಿಗಳ ಉಳಿವಿಗೆ ಪರಿಸರ ಕಾರಣ. ಇದನ್ನು ರಕ್ಷಿಸದಿದ್ದರೆ ಮನುಕುಲಕ್ಕೆ ತೊಂದರೆ ಖಚಿತ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶರಾವ್ ತಿಳಿಸಿದರು.

ಸಮೀಪದ ಬೆಟಗೇರಿ ಕೆರೆ ಅಂಗಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಕೆರೆ ಅಂಗಳದಿ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.

ಗಾಳಿ, ನೀರು, ಭೂಮಿ, ಬೆಳಕು ಹೀಗೆ ಮನುಷ್ಯನಾದಿಯಾಗಿ ಸಕಲ ಜೀವರಾಶಿಗಳು ಬದುಕಲು ಬೇಕಿರುವ ಎಲ್ಲವನ್ನೂ ಪರಿಸರ ಒದಗಿಸಿದೆ. ಅದನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಹಾಳು ಮಾಡಿದರೆ ಮನುಕುಲ ನಾನಾ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದರು.

ರಾಸಾಯನಿಕ, ಪ್ಲಾಸ್ಟಿಕ್ ಬಳಕೆಗೆ ಮೊದಲು ಮನುಷ್ಯನಿಗೆ ವಾತ, ಪಿತ್ತ, ಕಫ ಈ ಮೂರು ರೋಗಗಳು ಮಾತ್ರ ಇದ್ದವು. ಕೆರೆ, ನದಿ, ಭಾವಿಗಳ ನೀರನ್ನು ನೇರವಾಗಿ ಕುಡಿಯುತ್ತಿದ್ದರು. ಪ್ರಸ್ತುತ ಎಲ್ಲವೂ ರಾಸಾಯನಿಕಯುಕ್ತವಾಗಿದೆ. ಮೊದಲಿನ ಜೀವನ ಕ್ರಿಯೆ ನಡೆಸಲು ಪರಿಸರ ರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿರ್ಮೂಲನೆ ಅಗತ್ಯ ಎಂದರು.

ಶಿಕ್ಷಕ ಗಿರಿಯಪ್ಪ ಹಾರನಳ್ಳಿ ಮಾತನಾಡಿ, ಮನುಷ್ಯ ಪರಿಸರದ ಜತೆ ಸಂಘರ್ಷಕ್ಕೆ ಬಿದ್ದರೆ ಸೋಲುವುದು ಮಾನವನೆ. ಕಾರಣ ಗಿಡ ಮರಗಳನ್ನು ನೆಡುವುದು ಪುಣ್ಯದ ಕೆಲಸ ಎಂದು ತಿಳಿಯಬೇಕು. ಒಂದು ಮರ ಹತ್ತು ಮಕ್ಕಳಿಗೆ ಸಮ. ಇವನ್ನು ಉಳಿಸಿ ಬೆಳೆಸಬೇಕು ಎಂದರು.

ಗ್ರಾಪಂ ಅಧ್ಯಕ್ಷ ದುರಗಪ್ಪ ಭಜಂತ್ರಿ, ಯೋಜನಾಧಿಕಾರಿ ಜಗದೀಶ, ಜೆಇ ಸತೀಶ, ಕೃಷಿ ಮೇಲ್ವಿಚಾರಕರಾದ ಅಶೋಕ, ಲಿಂಗರಾಜ, ಪ್ರಮುಖರಾದ ವೀರೇಶ ಸಜ್ಜನ, ನಾರಾಯಣಪ್ಪ ಮತ್ತೂರು, ಅಂದಾನಸ್ವಾಮಿ, ಶಂಕ್ರಪ್ಪ ಬಡಿಗೇರ, ಶರಣಪ್ಪ ಮಡಿವಾಳರ, ಬಸವರಾಜ ನಾಗರಡ್ಡಿ, ಸತೀಶ, ಕನಕಪ್ಪ, ಮರ್ದಾನಲಿ, ರಾಜಾಸಾಬ, ಬೀಬಿಜಾನ, ರಾಜೇಶ್ವರಿ, ಕವಿತಾ, ಸವಿತಾ, ಮಂಜುನಾಥ ಮುಖ್ಯಶಿಕ್ಷಕ ಗಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net