ಮಕ್ಕಳನ್ನು ಕಲಿಕೆಗೆ ಸಿದ್ಧಗೊಳಿಸಿ

Untitled design (9)
Published on

ಅಳವಂಡಿ: ಶಾಲಾ ಪೂರ್ವ ಶಿಕ್ಷಣ ಮಕ್ಕಳ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯಾಗಿದೆ ಎಂದು ಅಜೀಮ್ ಪ್ರೇಮ್‌ಜಿ ಪೌಂಡೇಷನ್ ಸಂಪನ್ಮೂಲ ವ್ಯಕ್ತಿ ದೇವರಾಜ ಕೊಂಡೇನಹಳ್ಳಿ ಹೇಳಿದರು.

ಗ್ರಾಮದ 7ನೇ ಅಂಗನವಾಡಿ ಕೇಂದ್ರದಲ್ಲಿ ಕವಲೂರು ಮತ್ತು ಅಳವಂಡಿ ವಲಯದ ಅಂಗನವಾಡಿ ಕೇಂದ್ರ ಹಾಗೂ ಅಜೀಮ್ ಪ್ರೇಮ್‌ಜಿ ಪೌಂಡೇಷನ್ ಜಂಟಿಯಾಗಿ ಹಮ್ಮಿಕೊಂಡಿದ್ದ ಮಕ್ಕಳ ಕಲಿಕಾ ತರಬೇತಿ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಮಾತನಾಡಿದರು.

ಕಲಿಕೆ ಮಕ್ಕಳ ಮನಸ್ಸನ್ನು ಸಂಪೂರ್ಣವಾಗಿ ಶಾಲೆಯ ಕಡೆಗೆ ತೆರಳಲು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ತಯಾರಿಸುವಲ್ಲಿ ಇದೊಂದು ಪರಿಣಾಮಕಾರಿ ಪ್ರಕ್ರಿಯೆಯಾಗಿದೆ. ಮಕ್ಕಳಿಗೆ ಕಲಿಕೆ ಬಗ್ಗೆ ಆಸಕ್ತಿ ವಹಿಸಲು ಮುಂದಾಗಬೇಕಾಗಿದೆ. ವಯಸ್ಸಿಗೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಅಗತ್ಯ ಜ್ಞಾನವನ್ನು ಒದಗಿಸುವುದು, ಸಾಮಾಜಿಕವಾಗಿ ಅಣಿಗೊಳಿಸಬೇಕಾಗಿದೆ. ಮಕ್ಕಳನ್ನು ಶಾಲಾ ಪೂರ್ವ ಸಿದ್ಧಗೊಳಿಸಬೇಕಾಗಿದೆ ಎಂದರು.

ಅಂಗನವಾಡಿ ಮೇಲ್ವಿಚಾರಕಿ ರಹಮತ್.ಬಿ ಮಾತನಾಡಿದರು. ಅಳವಂಡಿ ವಲಯದ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net