ಗರ್ಭಿಣಿಯರು ಪೌಷ್ಟಿಕಾಂಶ ಆಹಾರ ಸೇವಿಸಲಿ

Alavandi Village Health Training Program
ಕವಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರಮುಖರಾದ ಸುರೇಶ, ಗಂಗಮ್ಮ, ಗವಿಸಿದ್ದಪ್ಪ, ಗವಿಸಿದ್ದಯ್ಯ, ಮುತ್ತಣ್ಣ, ಈರಪ್ಪ, ಯಲ್ಲಮ್ಮ, ಬಸಮ್ಮ, ಅಂಬುಜಾ ಇತರರಿದ್ದರು.
Published on

ಅಳವಂಡಿ: ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯಕರ ಜೀವನ ಸಾಗಿಸಲು ಸಾಧ್ಯ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕಳಸಾಪುರ ಹೇಳಿದರು.

ಸಮೀಪದ ಕವಲೂರು ಗ್ರಾಮದಲ್ಲಿ ಜಿಪಂ, ತಾಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಪಂ ಕವಲೂರು ಜಂಟಿಯಾಗಿ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ತರಬೇತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಮೊಳೆಕೆಯೊಡೆದ ಕಾಳು, ಹಸಿರು ಪಲ್ಯ, ಹಾಲು, ಮೊಟ್ಟೆ ಹಾಗೂ ಸರ್ಕಾರ ನೀಡಿದ ಮಾತ್ರೆಗಳನ್ನು ಸೇವಿಸಬೇಕು. ಇವುಗಳ ಸೇವನೆಯಿಂದ ರೋಗಗಳಿಂದ ದೂರವಿರಬಹುದು. ವಿಶೇಷವಾಗಿ ಗರ್ಭಿಣಿಯರು, ಬಾಣಂತಿಯರು ಸಮತೋಲನ ಆಹಾರ ಸೇವಿಸಬೇಕು ಇದರಿಂದ ರಕ್ತಹೀನತೆ ಉಂಟಾಗುವುದಿಲ್ಲ. ಹಲವಾರು ರೋಗಗಳು ಕಲುಷಿತ ಕುಡಿಯುವ ನೀರಿನಿಂದ ಬರುತ್ತವೆ. ಹಾಗಾಗಿ ಎಲ್ಲರೂ ಶುದ್ಧ ನೀರನ್ನು ಬಳಸಬೇಕು ಎಂದರು.

ಸಾಂಕ್ರಾಮಿಕ ರೋಗ, ಅಸಾಂಕ್ರಾಮಿಕ ರೋಗ, ಪೌಷ್ಟಿಕ ಆಹಾರ, ಬಾಲ್ಯವಿವಾಹ, ಮಾನಸಿಕ ಆರೋಗ್ಯ, ಮುಟ್ಟಿನ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಪಿಡಿಒ ಸುರೇಶ ಉಪ್ಪಾರ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗವಿಸಿದ್ದಪ್ಪ ಗೊಂದಿಹೊಸಳ್ಳಿ, ಜಿ.ಎಸ್.ಬೂಸನೂರಮಠ, ಯಲ್ಲಮ್ಮ, ಬಸಮ್ಮ, ಅಂಬುಜಾ, ಪ್ರಮುಖರಾದ ಮುತ್ತಣ್ಣ ಬಿಸರಳ್ಳಿ, ಈರಪ್ಪ ಸುಂಕಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net