

ಅಳವಂಡಿ: ವಿದ್ಯಾರ್ಥಿಗಳು ಜೀವನದಲ್ಲಿ ಸಾಧಿಸಬೇಕಾದರೆ ಸಾಧನೆಯ ಗುರಿ ಸ್ಪಷ್ಟವಾಗಿರಲಿ ಎಂದು ಮುಖ್ಯ ಶಿಕ್ಷಕ ಜಿ.ಎಸ್.ಗೌಡರ ತಿಳಿಸಿದರು.
ಸಮೀಪದ ಕವಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಾರ್ಷಿಕ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ವಿದ್ಯಾರ್ಥಿ ಹಂತದಲ್ಲಿಯೇ ಸಾಧನೆಯ ಗುರಿ ಇಟ್ಟಾಗ ಪ್ರಗತಿಗೆ ಪ್ರಥಮ ಮೆಟ್ಟಿಲು ಆಗಲಿದೆ ಎಂದರು.
ವಿದ್ಯಾರ್ಥಿಗಳು ಆಸಕ್ತಿದಾಯಕ ವಿಷಯದಲ್ಲಿ ಅಭ್ಯಾಸ ಮಾಡಿ ಸಾಧನೆ ಮಾಡಬೇಕು. ವಿದ್ಯಾರ್ಥಿಗಳಿಗೆ ಓದು, ಚಿತ್ರಕಲೆ, ಕ್ರೀಡೆ, ಸಂಗೀತ, ಅಭಿನಯ ಮುಂತಾದ ಕ್ಷೇತ್ರಗಳು ಇವೆ. ಜೀವನದಲ್ಲಿ ಗುರಿ ಇದ್ದಾಗ ಮಾತ್ರ ಮಾರ್ಗ ಸ್ಪಷ್ಟವಾಗಿರುತ್ತದೆ ಎಂದರು.
ನಂತರ ಚಿತ್ರಕಲಾ ಪ್ರದರ್ಶನ ನಡೆಯಿತು. ವರ್ಷಪೂರ್ತಿ ಮಕ್ಕಳು ರಚಿಸಿದ ಚಿತ್ರಗಳು, ಚಿತ್ರಕಲಾ ಶಿಕ್ಷಕ ವೀರಯ್ಯ ಒಂಟಿಗೋಡಮಠ ರಚಿಸಿದ ಚಿತ್ರಕಲೆಗಳನ್ನು ಪ್ರದರ್ಶನ ಮಾಡಲಾಯಿತು. ಶಿಕ್ಷಕರಾದ ತೋಟಪ್ಪ ಮಟ್ಟಿ, ಮಮತಾ ಕೊಡಬಾಳ, ರಾಜಪ್ಪ, ನಾಗರಾಜ ಶೆಟ್ಟರ, ಮಲ್ಲಪ್ಪ ದಳವಾಯಿ, ವೀರಯ್ಯ ವಂಟಿಗೋಡಮಠ, ಪ್ರಭು ಸುಂಕಣ್ಣವರ, ದೇವಪ್ಪ ಮುಕ್ಕಣ್ಣವರ, ಸುಶೀಲಮ್ಮ, ಬಸಮ್ಮ, ಜೂನುಸಾಬ, ಸುರೇಶ ಹಾಗೂ ವಿದ್ಯಾರ್ಥಿಗಳು ಇದ್ದರು.