ವೈದ್ಯರ ಸಲಹೆ ಇಲ್ಲದೆ ಔಷಧ ಬಳಕೆ ಬೇಡ

Untitled design (22)
Published on

ಅಳವಂಡಿ: ಕಣ್ಣು ದೇಹದ ಪ್ರಮುಖ ಅಂಗ. ಜಗತ್ತನ್ನು ನೋಡುವ ಶಕ್ತಿ ಕಣ್ಣಿಗೆ ಇದೆ. ಇದರ ಸುರಕ್ಷತೆ ಬಗ್ಗೆ ಕಾಳಜಿ ಅವಶ್ಯ ಎಂದು ನೇತ್ರಾಧಿಕಾರಿ ಸಿದ್ದಪ್ಪ ಕಲ್ಯಾಣಿ ತಿಳಿಸಿದರು.

ಸಮೀಪದ ಹೈದರನಗರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಪ್ರಾಥಮಿಕ ಆರೋಗ್ಯ ಕೇಂದ್ರ ಕವಲೂರಿನಿಂದ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಶಿಬಿರದಲ್ಲಿ ಸೋಮವಾರ ಮಾತನಾಡಿದರು. ದೇಹದ ಪಂಚೇಂದ್ರೀಯಗಳಲ್ಲಿ ಕಣ್ಣು ಕೂಡ ಒಂದು. ಅದು ಬೆಳಕನ್ನು ಕಾಣುವ ಜ್ಞಾನೇಂದ್ರೀಯವಾಗಿದೆ. ಮಾನವನ ದೇಹದಲ್ಲಿ ಕಣ್ಣಿನ ರಚನೆ ಅತ್ಯಂತ ಸೂಕ್ಷ್ಮವಾಗಿದೆ. ಕಾರಣ ಅದನ್ನು ಆಗಾಗ ಸ್ವಚ್ಛಗೊಳಿಸುವ ಜತೆಗೆ ತಪಾಸಣೆ ಮಾಡಿಸಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆಯಿಂದ ಕಣ್ಣಿನ ರೋಗ ತಡೆಗಟ್ಟಬಹುದು. ವೈದ್ಯರ ಸಲಹೆ ಇಲ್ಲದೇ ಕಣ್ಣಿನ ಔಷಧ ಬಳಸಬೇಡಿ ಎಂದರು.

ಶಿಬಿರದಲ್ಲಿ 65 ಜನರ ನೇತ್ರ ತಪಾಸಣೆ ನಡೆಸಲಾಯಿತು. ಇದರಲ್ಲಿ 15 ಜನರ ಪೂರೆ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ಆರೋಗ್ಯ ನಿರೀಕ್ಷಣಾಧಿಕಾರಿ ಗವಿಸಿದ್ದಪ್ಪ ಗೊಂದಿಹೊಸಳ್ಳಿ, ಆರೋಗ್ಯ ಸುರಕ್ಷತಾಧಿಕಾರಿ ಯಲ್ಲಮ್ಮ ಕಂಬಳಿ, ಸಮುದಾಯ ಆರೋಗ್ಯ ಅಧಿಕಾರಿ ಆಸ್ಮಾ, ಆಶಾಗಳಾದ ಮೀನಾಕ್ಷಿ, ಗುಣಸಾಗರಮ್ಮ, ಅಂಗನವಾಡಿ ಕಾರ್ಯಕರ್ತೆ ಸರೋಜಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net