ಮನೆಯ ಮಕ್ಕಳಂತೆ ಪರಿಗಣಿಸಿ ಶಿಕ್ಷಣ ನೀಡಿ

150223 Alavandi School BEO Visit
ಅಳವಂಡಿ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಅಳವಂಡಿ: ವಸತಿ ಶಾಲೆಯ ಮಕ್ಕಳನ್ನು ಮನೆಯ ಮಗುವಿನಂತೆ ಪರಿಗಣಿಸಿ ಶಿಕ್ಷಣ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್. ಶಂಕರಯ್ಯ ಹೇಳಿದರು.

ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಗೆ ಮಂಗಳವಾರ ಭೇಟಿ ನೀಡಿ ಅಲ್ಲಿನ ಸೌಲಭ್ಯ ಪರಿಶೀಲಿಸಿ ಮಾತನಾಡಿದರು. ನಂತರ ಮಕ್ಕಳಿಗೆ ನೀಡುವ ಊಟ, ಧವಸ ಧಾನ್ಯ, ಕುಡಿವ ನೀರು, ಅಡುಗೆ ಮನೆ ಪರಿಶೀಲಿಸಿದರು.

ಸರ್ಕಾರ ನೀಡುವ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಮಕ್ಕಳಿಗೆ ಮಾರ್ಗಸೂಚಿ ಪ್ರಕಾರ ಗುಣಮಟ್ಟದ ಊಟ ನೀಡಬೇಕು. ಪ್ರತಿ ಮಗುವಿನ ಶಿಕ್ಷಣದ ಬಗ್ಗೆ ಕಾಳಜಿ ವಹಿಸಬೇಕು. ಪಠ್ಯೆ ಜತೆಗೆ ಪಠ್ಯೇತರ ಚಟುವಟಿಕೆಗೂ ಆದ್ಯತೆ ನೀಡುವಂತೆ ಶಾಲಾ ಸಿಬ್ಬಂದಿಗೆ ಸೂಚಿಸಿದರು.

ಸಿಆರ್‌ಪಿ ವಿಜಯಕುಮಾರ ಟಿಕಾರೆ, ಮುಖ್ಯಶಿಕ್ಷಕಿ ಜಯಾ ತಳಗೇರಿ, ಶಿಕ್ಷಕರಾದ ಪಕೀರಮ್ಮ ಮಠದ, ವಿಮಲಾಕ್ಷಿ ಕಟ್ಟಿ, ಸುನಿತಾ, ಇಸರತ್‌ಬಾನು, ಸವಿತಾ, ನಿಲಯ ಮೇಲ್ವಿಚಾರಕಿ ಚನ್ನಮ್ಮ ಚಿನ್ನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net