ಹಿರೇಹಳ್ಳಕ್ಕೆ ಸೇತುವೆ ನಿರ್ಮಿಸಿ

HIREHALLA
ಮೈದುಂಬಿ ಹರಿಯುತ್ತಿರುವ ಹಿರೇಹಳ್ಳದಲ್ಲಿ ಬೈಕ್ ಸವಾರರು ಸಂಚರಿಸುತ್ತಿರುವುದು.
Published on

ಅಳವಂಡಿ: ಗ್ರಾಮದಿಂದ ನಿಲೋಗಿಪುರಕ್ಕೆ ತೆರಳುವ ರಸ್ತೆ ಮಧ್ಯದ ಹಿರೇಹಳ್ಳಕ್ಕೆ ಸೇತುವೆ ಇಲ್ಲದಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಅಳವಂಡಿ ಹೋಬಳಿ ಕೇಂದ್ರವಾಗಿದ್ದು, ಇಲ್ಲಿಗೆ ಸಾವಿರಾರು ಜನರು ವಾಣಿಜ್ಯ ವಹಿವಾಟು, ಶಾಲೆ, ಕಾಲೇಜು, ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ಆಗಮಿಸುತ್ತಾರೆ. ಆದರೆ ನಿಲೋಗಿಪುರ, ಹಲವಾಗಲಿ, ಕೇಸಲಾಪುರ ಇತರ ಗ್ರಾಮದಿಂದ ಸಂಚರಿಸುವ ಜನರಿಗೆ ಹಿರೇಹಳ್ಳ ಅಡ್ಡಿಯಾಗಿದೆ. ಈ ಹಳ್ಳಕ್ಕೆ ಸೇತುವೆ ನಿರ್ಮಿಸಲು ದಶಕಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಪ್ರಯೋಜನವಾಗಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ನೆಲಮಟ್ಟದ ಸೇತುವೆ ಕಲ್ಲುಗಳಿಂದ ನಿರ್ಮಿಸಲಾಗಿದೆ. ಆದರೆ, ಹಳ್ಳದ ರಭಸಕ್ಕೆ ಕಲ್ಲುಗಳು ಕಿತ್ತು ಹೋಗಿವೆ. ಮಳೆಗಾಲದಲ್ಲಿ ಸದಾ ನೀರು ಹರಿಯುತ್ತಿರುವುದರಿಂದ ಸಂಚಾರ ಬಲು ಕಷ್ಟವಾಗಿದೆ. ಸುತ್ತಿ ಬಳಸಿ 10 ರಿಂದ 15ಕಿ.ಮೀ. ಕ್ರಮಿಸಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಹಿರೇಹಳ್ಳಕ್ಕೆ ಸೇತುವೆ ನಿರ್ಮಿಸಿ ಸಂಚಾರಕ್ಕೆ ಅನೂಕೂಲ ಮಾಡಿಕೊಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net