

ಅಳವಂಡಿ: ಸಮೀಪದ ಹಿರೇಸಿಂದೋಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಗುರುಸ್ವಾಮಿ ಅವರು ದಾಖಲಾದ ಒಂದನೇಯ ತರಗತಿ ಮಕ್ಕಳ ಹೆಸರಿನಲ್ಲಿ ಒಂದು ಸಾವಿರ ರೂ.ಗಳ ಠೇವಣಿ ಇಡುವ ಮೂಲಕ ಗಮನ ಸೆಳೆದಿದ್ದಾರೆ.
ಮಕ್ಕಳ ಹೆಸರಿನಲ್ಲಿ ಹತ್ತು ವರ್ಷಗಳ ಅವಧಿಗೆ ಠೇವಣಿ ಇಡುತ್ತಿದ್ದು, ಇದುವರೆಗೂ ಸುಮಾರು 30 ಮಕ್ಕಳಿಗೆ ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದಾರೆ. ಠೇವಣಿ ಹಣದ ಜತೆಗೆ ಮಕ್ಕಳಿಗೆ ಸ್ಕೂಲ್‌ಬ್ಯಾಗ್, ಪೆನ್, ನೋಟಬುಕ್, ಪೆನ್ಸಿಲ,ಟೈ, ಬೆಲ್ಟ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಶಾಲೆಗಳ ಅಂದ ಚಂದ ಹೆಚ್ಚಿಸುವ ಕಲರವ ತಂಡದ ಸದಸ್ಯರಾಗಿರುವ ಗುರುಸಸ್ವಾಮಿ ಅವರು ಪ್ರತಿ ತಿಂಗಳು ಒಂದು ಶಾಲೆಯನ್ನು ಸ್ವಂತ ಖರ್ಚಿನಲ್ಲಿ ಶ್ರಮದಾನದ ಮೂಲಕ ಬಣ್ಣ ಹಚ್ಚಿ ಅಂದಗೊಳಿಸುವ ಕಾರ್ಯ ಮಾದರಿಯಾಗಿದೆ. ಅವರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದು ಮೂಲ ಉದ್ದೇಶವಾಗಿದೆ. ಗುರುಸ್ವಾಮಿ ಅವರ ಸೇವೆಗೆ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ತಂಡದಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ವಿವಿಧ ಸಂಘಟನೆಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ.
=============
ಕೋಟ್
ಸರ್ಕಾರಿ ಶಾಲೆಗಳ ಉಳಿವಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಕೆಲಸ ಸಂತೃಪ್ತಿ ನೀಡಿದೆ. ಶಾಲಾ ಮಕ್ಕಳಿಂದ ನಮ್ಮ ಜೀವನ. ಅವರ ಸೇವೆ ಮಾಡುವುದು ಸೌಭಾಗ್ಯ. ಗ್ರಾಮೀಣ ಭಾಗದ ಮಕ್ಕಕಳಿಗೂ ಉತ್ತಮ ಶಿಕ್ಷಣ ಸಿಗಲೆಂದು ಕೈಲಾದ ಸಹಾಯ ಮಾಡುತ್ತಿರುವೆ.
ಗುರುಸ್ವಾಮಿ.ಆರ್
ಪ್ರಭಾರ ಮುಖ್ಯ ಶಿಕ್ಷಕ
==================
ಕೋಟ್,
ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸುವ ಸಲುವಾಗಿ ಮಕ್ಕಳಿಗೆ ಠೇವಣಿ ಇಡುವ ಮೂಲಕ ಹಾಗೂ ಇತರ ಪ್ರೋತ್ಸಾಹದಾಯಕ ಸೌಲಭ್ಯ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಸೇವೆ ಇತರ ಶಿಕ್ಷಕರಿಗೆ ಮಾದರಿಯಾಗಿದೆ.
ಗವಿಸಿದ್ದಪ್ಪ ಮಣ್ಣಮ್ಮನವರ
ಎಸ್‌ಡಿಎಮ್‌ಸಿ ಅಧ್ಯಕ್ಷ