

ಅಳವಂಡಿ: ಸಮೀಪದ ಹಿರೇಸಿಂದೋಗಿ ಗ್ರಾಮದಲ್ಲಿ ಭಗೀರಥ ಮಹರ್ಷಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಯಂತಿ ಆಚರಣೆ ಮಂಗಳವಾರ ಅದ್ದೂರಿಯಾಗಿ ನಡೆಯಿತು.
ಮೂರ್ತಿಗೆ ಹಿರೇಸಿಂದೋಗಿ ಕಪ್ಪತ್ತಮಠದ ಶ್ರೀ ಚಿದಾನಂದ ಸ್ವಾಮಿಗಳಿಂದ ಮಾಲಾರ್ಪಣೆ ಮಾಡಿ ಮಾತನಾಡಿ, ಭಗೀರಥ ಮಹರ್ಷಿಗಳು ಗಂಗೆಯನ್ನು ಧರೆಗೆ ತಂದು ಇಡೀ ಜೀವರಾಶಿಗೆ ಅನುಕೂಲ ಮಾಡಿದ್ದಾರೆ. ಇಂದಿನ ಯುವ
ಪೀಳಿಗೆ ಜೀವನದಲ್ಲಿ ಸಾಧನೆ ಮಾಡಲು ಭಗೀರಥ ಮಹರ್ಷಿಯಂತೆ ಶಪಥ ಮಾಡಬೇಕು. ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ರುದ್ರಮುನಿಸ್ವಾಮಿ ಮಠದ, ತಾಪಂ ಮಾಜಿ ಉಪಾಧ್ಯಕ್ಷ ನಿಂಗಪ್ಪ ಯತ್ನಟ್ಟಿ, ಪ್ರಮುಖರಾದ ರೇವಪ್ಪ ಡೊಳ್ಳಿನ, ಆನಂದ ಹೊಸಳ್ಳಿ, ಮಲ್ಲಪ್ಪ ಬಿಕನಳ್ಳಿ, ಹೊನ್ನಪ್ಪ ಗದ್ದಿ, ಯಂಕಪ್ಪ ಹೊಸಳ್ಳಿ, ಬಾಲಪ್ಪ, ಚನ್ನಪ್ಪ, ಕಟ್ಟೆಪ್ಪ, ನೇಮರಾಜ, ಗವಿಸಿದ್ದಪ್ಪ, ದೇವಪ್ಪ, ಮಂಜುನಾಥ, ಮಲ್ಲಪ್ಪ, ಶಂಕ್ರಪ್ಪ ಇತರರಿದ್ದರು.