ಹಟ್ಟಿ ಗ್ರಾಮದ ಸರ್ಕಾರಿ ಶಾಲೆ ಮಕ್ಕಳ ಸಾಧನೆ

Alavandi Sports selected
ಕೊಪ್ಪಳದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು.
Published on

ಅಳವಂಡಿ: ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಕೊಪ್ಪಳದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಜಯಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ, ಬಾಲಕಿಯರ ಕಬಡ್ಡಿ (ಪ್ರಥಮ), ಬಾಲಕಿಯರ ಖೋಖೋ (ಪ್ರ), ಬಾಲಕಿಯರ ಥ್ರೋಬಾಲ್(ಪ್ರ), 4*100 ಮೀ. ರಿಲೇ (ದ್ವಿ), ಬಾಲಕರ ಥ್ರೋಬಾಲ್ (ದ್ವಿ), ಬಾಲಕಿಯರ ವಾಲಿಬಾಲ್ (ದ್ವಿ),

ಶ್ರೀದೇವಿ ಬೆಟಗೇರಿ 100 ಮೀ. ಓಟ (ಪ್ರ), ಲಕ್ಷ್ಮಪ್ಪ 400 ಮೀ. (ಪ್ರ), ಸುಧಾ 1500 ಮೀ. (ಪ್ರ), ಬಸವರಾಜ ಶ್ಯಾವಣ್ಣವರ 3000 ಮೀ. (ಪ್ರ), 1500 ಮೀ ಓಟ (ದ್ವಿ),

ಸುಮಂಗಲಾ ಚವಟಗಿ 3000 ಮೀ. (ಪ್ರ), ಎತ್ತರ ಜಿಗಿತ (ದ್ವಿ), ಹನುಮೇಶ ಬಂಡಿ ಗುಂಡು ಎಸೆತ, ಚಕ್ರ ಎಸೆತ (ಪ್ರ), ಎತ್ತರ ಜಿಗಿತ (ದ್ವಿ), ಸಚಿನ ಪತ್ತಾರ ಲಾಂಗ್ ಜಂಪ್, ತ್ರಿವಿಧ ಜಿಗಿತ (ಪ್ರ),

ಹುಲಿಗೆಮ್ಮ ಕಟಗಾಲಿ ಗುಂಡು ಎಸೆತ (ಪ್ರ), ಸಾವಿತ್ರಿ ಸುಗ್ಗಿ ಚಕ್ರ ಎಸೆತ (ಪ್ರ), ದೇವರಾಜ ಬೆಟಗೇರಿ 3000 ಮೀ. (ದ್ವಿ),

ಅಕ್ಕಮ್ಮ ಜೋಗಿನ 1500 ಮೀ. (ದ್ವಿ), ಅಭಿಷೇಕ ಗೌಡ 400 ಮೀ ಓಟ, ತ್ರಿವಿಧ ಜಿಗಿತ (ದ್ವಿ) ಸ್ಥಾನ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net