

ಅಳವಂಡಿ: ಮಕ್ಕಳಿಗೆ ಶಿಕ್ಷಣವೇ ದೊಡ್ಡ ಆಸ್ತಿ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಉಪನ್ಯಾಸಕರ, ಪಾಲಕರ ಪಾತ್ರ ದೊಡ್ಡದು ಎಂದು ಕಾಲೇಜು ಪ್ರಭಾರ ಪ್ರಾಚಾರ್ಯ ಜಿ.ಕೆ. ವೀರೇಶ್ ತಿಳಿಸಿದರು.
ಸಮೀಪದ ಹಲಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ನೂತನ ಕಾಲೇಜು ಅಭಿವೃದ್ಧಿ ಸಮಿತಿ ಪದಗ್ರಹಣ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಸಮಿತಿ ಸದಸ್ಯರು ಕಾಲೇಜಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.
ನಿವೃತ್ತ ಪ್ರಾಚಾರ್ಯ ಜಿ.ಎಂ.ಭೂಸನೂರಮಠ, ಗ್ರಾಪಂ ಸದಸ್ಯ ನಾಗರಾಜ್ ಪಾಲಂಕರ, ಪ್ರಮುಖರಾದ ವಿಜಯ ಮಹಾಂತೇಶ ಪಾಟೀಲ, ದೇವಪ್ಪ ದದೇಗಲ, ಉಮೇಶಗೌಡ ದಳಪತಿ, ಕರಿಯಪ್ಪ ಹಳ್ಳಿಕೇರಿ, ಭೀಮಣ್ಣ ಗುಡ್ಲಾನೂರ, ಪರಶುರಾಮ ತಳವಾರ, ಶಿವಶಂಕರ, ದೊಡ್ಡನಗೌಡ ಪಾಟೀಲ, ಉಪನ್ಯಾಸಕರು, ಮುಖಂಡರು, ವಿದ್ಯಾರ್ಥಿಗಳು ಹಾಜರಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿ: ಶಾಸಕ ರಾಘವೇಂದ್ರ ಹಿಟ್ನಾಳ್(ಅಧ್ಯಕ್ಷ), ಭೀಮಣ್ಣ ಹುಲ್ಲಾನುರ (ಉಪಾಧ್ಯಕ್ಷ), ಹನುಮಂತಪ್ಪ ಅಬ್ಬಿಗೇರಿ, ಹುಲಿಗೆಮ್ಮ ವಡ್ಡರ, ಶೇಖಪ್ಪ ತಳವಾರ, ಯಮನೂರ ಸಾಬ ನದಾಫ್, ಶಂಕ್ರಪ್ಪ ತಳಕಲ್, ಶಿವಮ್ಮ ಓಜನಹಳ್ಳಿ (ಸದಸ್ಯರು) ಆಯ್ಕೆಯಾದರು.