ಕಲೆಗಳ ಉಳಿವಿಗೆ ಮುಂದಾಗಲಿ

ALD-1
ಹಲಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ರಣರಂಗದಲ್ಲಿ ರಕ್ತದೋಕುಳಿ ಎಂಬ ಸಾಮಾಜಿಕ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮಿ ತಾತನಗೌಡ ಪಾಟೀಲ ಮಾತನಾಡಿದರು. ಪ್ರಮುಖರಾದ ಯಲ್ಲಪ್ಪ, ರಾಜಣ್ಣ, ಮಂಜುನಾಥ, ಜಗದೀಶ, ದೇವಣ್ಣ, ಮಲ್ಲಿಕಾರ್ಜುನ, ಮಾರುತೇಪ್ಪ, ಭೀಮಣ್ಣ ಹಾಗೂ ಇತರರಿದ್ದರು.
Published on

ಅಳವಂಡಿ: ನಾಟಕವೆಂದರೆ ಬಣ್ಣ ಹಚ್ಚಿಕೊಂಡು ಕುಣಿಯುವುದಲ್ಲ. ಸಮಾಜದ ಅಂಕು ಡೊಂಕು ತಿದ್ದುವ ಹಾಗೂ ಜೀವನ ನಡೆಸುವ ವಿಷಯ ತಿಳಿಸುತ್ತವೆ ಎಂದು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತಾತನಗೌಡ ಪಾಟೀಲ ತಿಳಿಸಿದರು.

ಸಮೀಪದ ಹಲಗೇರಿ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಶಾಂಭವಿ ಜಾತ್ರೆಯ ಅಂಗವಾಗಿ ಶ್ರೀ ಭಕ್ತ ಕನಕದಾಸ ಯುವಕ ಸಂಘದವರು ಅಭಿನಯಿಸಿದ ‘ರಣರಂಗದಲ್ಲಿ ರಕ್ತದೋಕುಳಿ’ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದರು.

ಪೂರ್ವಜರು ಹಿಂದಿನ ಕಾಲದಿಂದಲೂ ನಾಟಕ, ಬಯಲಾಟ, ಜಾನಪದ ಕಲೆಗಳ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಕಲೆಗಳು ಮೊಬೈಲ್ ಹಾವಳಿಯಲ್ಲಿ ನಶಿಸುತ್ತಿವೆ. ಹೀಗಾಗಿ ಕಲೆಗಳ ಉಳಿವಿಗೆ ಎಲ್ಲರೂ ಮುಂದಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net