

ಅಳವಂಡಿ: ಗ್ರಾಮದ ಗ್ರಾಪಂಯಲ್ಲಿ ಹಡಪದ ಅಪ್ಪಣ್ಣ ಜಯಂತಿಯನ್ನು ಗುರುವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಪಿಡಿಒ ಕೊಟ್ರಪ್ಪ ಅಂಗಡಿ ಮಾತನಾಡಿ, ಶರಣ ಹಡಪದ ಅಪ್ಪಣ್ಣ ಸಮ ಸಮಾಜ ನಿರ್ಮಾಣ, ಜಾತಿ, ಧರ್ಮ, ವರ್ಣ ಹಾಗೂ ವರ್ಗರಹಿತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ ಎಂದು ಹೇಳಿದರು. ಅಂಗನವಾಡಿ ಮೇಲ್ವಿಚಾರಕಿ ರೆಹಮತ್ ಬಿ, ಪ್ರಮುಖರಾದ ಶಿವಮೂರ್ತಿ, ಪ್ರಕಾಶ ಇಳಿಗೇರ, ದೇವೇಂದ್ರರಡ್ಡಿ, ಗೀತಾ, ಮಾರುತಿ, ಏಕಯ್ಯ, ಮಲ್ಲು ಇತರರಿದ್ದರು.