

ಅಳವಂಡಿ: ಗುರುಪೂರ್ಣಿಮೆಯನ್ನು ಗುರು ಮತ್ತು ಶಿಷ್ಯರ ನಡುವಿನ ಬಾಂಧವ್ಯವನ್ನು ಗೌರವಿಸುವುದಕ್ಕಾಗಿ ಆಚರಿಸಲಾಗುತ್ತದೆ. ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿನ ಮಹತ್ವ ಇರುತ್ತದೆ ಎಂದು ಕುಕನೂರಿನ ಅನ್ನದಾನೇಶ್ವರ ಶಾಖಾ ಮಠದ ಡಾ.ಮಹಾದೇವ ಸ್ವಾಮಿಗಳು ತಿಳಿಸಿದರು.
ಸಮೀಪದ ಬೆಟಗೇರಿ ಗ್ರಾಮದ ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದಲ್ಲಿ ಗುರುಪೂರ್ಣಿಮೆ ನಿಮಿತ್ತ ಹಮ್ಮಿಕೊಂಡಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಗುರು ನಮಗೆ ಪ್ರತಿಯೊಂದು ಹಂತದಲ್ಲೂ ಜ್ಞಾನವನ್ನು ಮತ್ತು ಮಾರ್ಗದರ್ಶನವನ್ನು ನೀಡುತ್ತಾನೆ. ಗುರು ಜ್ಞಾನ ನೀಡುವ ಶಕ್ತಿ. ಅವರನ್ನು ಪೂಜಿಸಿ ನಮಿಸೋಣ ಎಂದರು.
ದ್ಯಾಮಣ್ಣ ಮಾಸ್ತರ ಹಾರ್ಮೋನಿಯಂ ಹಾಗೂ ಪ್ರಭು ಶಿವ ಸಿಂಪಿಗೇರ ತಬಲಾ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಕಂಪಸಾಗರದ ನಾಗಯ್ಯ ಸ್ವಾಮಿ, ಪ್ರಮುಖರಾದ ಗುರುಬಸಯ್ಯ ಬ್ರಹನ್ಮಠ, ಬಸವರಾಜ ನಾಗರಾಡಿ, ಶಂಕರಪ್ಪ ಬಡಿಗೇರ, ಕೀರ್ತಿಗೌಡ, ಮುತ್ತಯ್ಯ, ಶಂಕ್ರಪ್ಪ ಕಡಳ್ಳಿ, ಸೋಮಪ್ಪ ಮತ್ತೂರು ಇತರರು ಇದ್ದರು.