

ಅಳವಂಡಿ: ಸಮೀಪದ ಗುಡಗೇರಿ ಗ್ರಾಮದಲ್ಲಿ ಶ್ರೀದುರ್ಗಾದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ಶ್ರೀದುರ್ಗಾದೇವಿಯ ನೂತನ ಮೂರ್ತಿಯ ಪುರಪ್ರವೇಶ ಕಾರ್ಯಕ್ರಮ ಮೆರವಣಿಗೆ ಅದ್ದೂರಿಯಿಂದ ನಡೆಯಿತು.
ಶ್ರೀದುರ್ಗಾದೇವಿ ಮೂರ್ತಿ ಗ್ರಾಮದ ಬನ್ನಿಕಟ್ಟಿಯ ಹತ್ತಿರ ಆಗಮಿಸುತ್ತಿದ್ದಂತೆ ಪೂಜೆ ಕಾರ್ಯಗಳು ನಡೆದವು. ನಂತರ ತಳಿರು, ತೋರಣ ಹಾಗೂ ಹೂಗಳಿಂದ ಅಲಂಕರಿಸಿದ ತೆರದ ವಾಹನದಲ್ಲಿ ಮೂರ್ತಿಯನ್ನಿರಿಸಿ ಮಹಿಳೆಯರ ಕಳಸ, ಕುಂಭ ಹಾಗೂ ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಯಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಪ್ರಮುಖರಾದ ತಿಪ್ಪಣ್ಣ ತೋಟದ, ರವಿ ಅಂಬಳಿ, ವಿರುಪಾಕ್ಷಿ ಬನ್ನಿಕೊಪ್ಪ, ಹೇಮರಡ್ಡಿ ತೋಟದ, ವೆಂಕಣ್ಣ ಆಡೂರು, ಸಣ್ಣ ಹನುಮಪ್ಪ ಬಳ್ಳಾರಿ, ಶರಣಪ್ಪ ಬಳ್ಳಾರಿ, ಸಿದ್ದಪ್ಪ ಬಳ್ಳಾರಿ, ಶರಣಪ್ಪ ತೋಟದ, ಬಸವರಾಜ ವುಟಗನೂರು, ಶರಣಪ್ಪ ವುಟಗನೂರು, ಬಸವರಾಜ ಆಡೂರು, ಶರಣಪ್ಪ ಆಡೂರು, ಬಸಯ್ಯ ಹಿರೇಮಠ, ಶರಣಯ್ಯ ಹಿರೇಮಠ, ಶಿವಪ್ಪ ತೆಗ್ಗಿನಮನಿ, ಈಶ್ವರಗೌಡ ಶರಭಗೌಡ್ರ, ಶಿವಾನಂದ ನಾಗರಳ್ಳಿ, ಉಮೇಶ ಕೆಳಗಿನಗೌಡ್ರ, ಪಂಪಾಪತಿ.ಕೆ, ಈರನಗೌಡ, ಜಗದೀಶ ಹಾಗೂ ಗ್ರಾಮಸ್ಥರು ಇದ್ದರು.