ಕುಡಿವ ನೀರು ಪೂರೈಕೆಗೆ ಆದ್ಯತೆ

SABHE
ಕವಲೂರು ಗ್ರಾಪಂನಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು. ಪಿಡಿಒ ಸಣ್ಣಜಂಬಣ್ಣ, ಉಪಾಧ್ಯಕ್ಷೆ ಅನ್ನಪೂರ್ಣಾ, ಸದಸ್ಯರಾದ ಹಾಲಪ್ಪ ಬಳ್ಳಾರಿ, ಲೀಲಾವತಿ ವುಟಗನೂರ, ನಾಗರಾಜ ಹಕ್ಕಂಡಿ, ಗುರುಶಾಂತಯ್ಯ ಲಿಂಬಿಕಾಯಿಮಠ, ಗವಿಸಿದ್ದಪ್ಪ ದ್ಯಾಂಪೂರ, ದೀಪಾ ಬಂಡಿ ಇದ್ದರು.
Published on

ಅಳವಂಡಿ: ಸಮೀಪದ ಕವಲೂರು ಗ್ರಾಪಂನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯ ಕುರಿತು ಚರ್ಚೆ ನಡೆಸಲಾಯಿತು.

ಸದಸ್ಯೆ ಪದ್ದವ್ವ ಗುಡಿಹಿಂದ್ಲ ಮಾತನಾಡಿ, ಹಲವರು ವಸತಿ ಮನೆಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಕೆಲ ದಿನಗಳಿಂದ ಪಂಚಾಯಿತಿಗೆ ಮನೆಗಳು ಮಂಜೂರಾಗಿಲ್ಲ. ಸರ್ವ ಸದಸ್ಯರು ಶಾಸಕರನ್ನು ಭೇಟಿ ಮಾಡಿ ಹೆಚ್ಚುವರಿ ಮನೆ ಮಂಜೂರಿಗೆ ಆಗ್ರಹಿಸಿ ಬೇಡಿಕೆ ಸಲ್ಲಿಸಬೇಕಾಗಿದೆ. ಸಿಸಿ ರಸ್ತೆ, ಚರಂಡಿ ನಿರ್ಮಾಣ, ಸ್ವಚ್ಛತೆ, ಕುಡಿವ ನೀರು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದರು.

ಪ್ರಸಕ್ತ ಸಾಲಿನ 15ನೇ ಹಣಕಾಸು ಯೋಜನೆಯಡಿ ಕೈಕೊಳ್ಳಬಹುದಾದ ಕಾಮಗಾರಿಗಳ ಬಗ್ಗೆ ಸರ್ವ ಸದಸ್ಯರು ಚರ್ಚೆ ನಡೆಸಿ, ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದರು. ಗ್ರಾಪಂ ಸದಸ್ಯರಾದ ಪ್ರದೀಪಕುಮಾರ ಸಜ್ಜೇದಮಠ, ಸುಮಿತ್ರಾ ಹಳ್ಳಿಗುಡಿ, ಬಸಮ್ಮ ಹೊಸಮನಿ, ಸಣ್ಣಬರಮಪ್ಪ ಕಳಸಣ್ಣವರ, ಶಾಂತವ್ವ ವಡ್ಡರ, ಶಾಂತವ್ವ ಬಳೂಟಗಿ, ಈರಪ್ಪ ಕೆಳಗಡೆ, ರೇಣವ್ವ ಬಂಡಿ, ಬದರುದ್ದೀನ ಶಾ ಮಂಕಾನದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net