ವಿದ್ಯಾರ್ಥಿಗಳು ನಿರಂತರವಾಗಿ ಶ್ರದ್ಧೆಯಿಂದ ಅಭ್ಯಾಸ ಮಾಡಲಿ

Alavandi graduation ceremony
ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಾಚಾರ್ಯ ಡಾ.ಕೆ.ಸತೀಶ ಉದ್ಘಾಟಿಸಿದರು. ಪ್ರಾಚಾರ್ಯ ಜಗದೀಶ ಆಲದಕಟ್ಟಿ, ನಿವೃತ್ತ ಪ್ರಾಚಾರ್ಯ ಶಂಭುಲಿಂಗ ಚಿಗರಿ, ಉಪನ್ಯಾಸಕ ಡಾ.ನಾಗರಾಜ ಹಾವನಾಳ, ಪ್ರಮುಖ ಬಸವರಡ್ಡೆಪ್ಪ ಇತರರಿದ್ದರು.
Published on

ಅಳವಂಡಿ: ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದು ಉಪನ್ಯಾಸಕರ ಕೆಲಸವಾದರೆ ಸದುಪಯೋಗ ಪಡಿಸಿಕೊಳ್ಳುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಸತೀಶ ತಿಳಿಸಿದರು.

ಗ್ರಾಮದ ಶ್ರೀ ಶಿವಮೂರ್ತಿಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪದವಿ ಅಂತಿಮ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಮತ್ತು ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು. ಜತೆಗೆ ಶಿಸ್ತು ಹಾಗೂ ಸಂಯಮ ರೂಢಿಸಿಕೊಂಡಾಗ ಸಾಧನೆ ಶಿಖರವೇರಲು ಸಾಧ್ಯ ಎಂದರು.

ನಿವೃತ್ತ ಪ್ರಾಚಾರ್ಯ ಶಂಭುಲಿಂಗ ಚಿಗರಿ ಮಾತನಾಡಿದರು. ಶಿಕ್ಷಣ ಪ್ರೇಮಿ ಬಸವರಡ್ಡೆಪ್ಪ ಹಳ್ಳಿಕೇರಿ, ಪ್ರಾಚಾರ್ಯ ಜಗದೀಶ ಆಲದಕಟ್ಟಿ, ಐಕ್ಯೂಎಸಿ ಸಂಚಾಲಕ ಡಾ.ನಾಗರಾಜ ಹಾವನಾಳ ಮಾತನಾಡಿದರು.

ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಹನುಮಂತಪ್ಪ ಕರಡಿ, ಮಂಜುನಾಥ ಹಿರೇಮಠ, ನಜರುದ್ದೀನ್ ಬಿಸರಳ್ಳಿ, ಇಸ್ಮಾಯಿಲ್ ಕವಲೂರು, ಸಾಗರ ಉಪ್ಪಾರ, ಉಮಾ ಕರ್ಕಿಹಳ್ಳಿ, ಉಪನ್ಯಾಸಕರಾದ ಶಂಕ್ರಪ್ಪ ಹಳ್ಳಿ, ಪ್ರವೀಣ, ಸಾಲಿಯಾಬೇಗಂ, ಡಾ.ಹಂಪಾದೇವಿ, ರೇಷದಮಾ, ವಿಜಯಕುಮಾರ, ಪ್ರದೀಪ, ವೆಂಕಟೇಶ, ಕೃಷ್ಣ, ಸಿದ್ದಪ್ಪ, ಇಬ್ರಾಹಿಂಸಾಬ, ವಿನಾಯಕ, ಹಗಲೂರಪ್ಪ, ದೇವರಾಜ, ವೀರಯ್ಯ, ರಾಘವೇಂದ್ರ, ರೆಹಮಾನಸಾಬ, ಮಹೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net