

ಅಳವಂಡಿ: ಇಲ್ಲಿನ ಗ್ರಾಪಂನಲ್ಲಿ ನುಲಿಯ ಚಂದಯ್ಯ ಅವರ ಜಯಂತಿಯನ್ನು ಇತ್ತೀಚೆಗೆ ಆಚರಿಸಲಾಯಿತು.
ಪಿಡಿಒ ಕೊಟ್ರಪ್ಪ ಅಂಗಡಿ ಮಾತನಾಡಿ, ಶರಣರು, ಸಂತರ ಆದರ್ಶಗಳು ನಮ್ಮ ಜೀವನಕ್ಕೆ ದಾರಿದೀಪವಾಗಿವೆ.
ಅವರ ಆದರ್ಶಗಳನ್ನು ಸರ್ವರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. 12 ನೇ ಶತಮಾನದಲ್ಲಿ ಸಮಾಜ ಪರಿವರ್ತನೆ ಹರಿಕಾರರಾಗಿದ್ದ ಬಸವಣ್ಣನವರೊಂದಿಗೆ ಕಾಯಕ ಮಹತ್ವವನ್ನು ಸಾರಿದ ಶರಣರ ನುಡಿಗಳನ್ನು ಪಾಲಿಸಬೇಕು ಎಂದರು.