

ಅಳವಂಡಿ: ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರಯ್ಯ ಟಿ.ಎಸ್ ಬುಧವಾರ ಬೇಟಿ ನೀಡಿ ಪರಿಶೀಲಿಸಿದರು.
ಶಾಲಾ ದಾಖಲಾತಿ, ಹಾಜರಾತಿ, ಪಠ್ಯಪುಸ್ತಕ ವಿತರಣೆ, ಸಮವಸ್ತ್ರ ವಿತರಣೆ, ಬಿಸಿಯೂಟ ಹಾಗೂ ಇತರ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಸರ್ಕಾರದ ಸೌಲಭ್ಯಗಳನ್ನು ಮಕ್ಕಳಿಗೆ ತಲುಪಿಸಿ. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಬೋಧನೆ ಮಾಡಬೇಕು. ಶಾಲೆಗಳ ಅಭಿವೃದ್ಧಿಗೆ ಎಸ್‌ಡಿಎಮ್‌ಸಿ ಹಾಗೂ ಸಾರ್ವಜನಿಕರ ಸಹಕಾರ ಪಡೆದುಕೊಳ್ಳಬೇಕು. ಪಾಲಕರು ಕೂಡ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಶಿಕ್ಷಕಗೆ ಬಿಇಒ ಶಂಕರಯ್ಯ ಟಿ.ಎಸ್ ಸೂಚಿಸಿದರು.
ಕೊಪ್ಪಳ ದೈಹಿಕ ಶಿಕ್ಷಣ ಪರಿವೀಕ್ಷಕ ವಿ.ಬಿ.ಗೌಡರ, ಸಿಆರ್‌ಪಿಗಳಾದ ಪಂಪಾಪತಿ, ದೇವರಡ್ಡಿ ಕಲ್ಗುಡಿ, ಇಬ್ರಾಹಿಂಸಾಬ, ಮುಖ್ಯ ಶಿಕ್ಷಕ ಮಹಮದ್‌ರಫೀ, ಪ್ರಮುಖರಾದ ಉಮೇಶ ಡಂಬಳ, ಹನುಮರಡ್ಡಿ ಗಿರಡ್ಡಿ, ಯಮನೂರಪ್ಪ ಮುರ್ಲಾಪುರ, ಶಿಕ್ಷಕರು ಇದ್ದರು.