ಜನಪದ ಗೀತೆಗಳಲ್ಲಿ ಜೀವನದ ಮೌಲ್ಯ

ald-1
ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬೆಳ್ಳಿ ಮೂರ್ತಿ ಅನಾವರಣ ಹಾಗೂ ಕೊಪ್ಪಳ ತಾಲೂಕು ಮಟ್ಟದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವೇಮ ಹೇಮರಡ್ಡಿ ಪೀಠದ ವೇಮನಾನಂದ ಸ್ವಾಮೀಜಿ, ಹಿರೇಶಾಂತವೀರ ಸ್ವಾಮೀಜಿ, ಮರುಳಾರಾಧ್ಯ ಶಿವಾಚಾರ್ಯರು, ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ.ಚಂದ್ರಶೇಖರ, ಪ್ರಮುಖರಾದ ಜಗದೀಶಪ್ಪ, ಪ್ರಭು, ಸಂಧ್ಯಾ, ಸುನಂದಾ, ಬಸವರಡ್ಡೆಪ್ಪ ಇತರರಿದ್ದರು.
Published on

ಅಳವಂಡಿ: ಜನಪದ ಸಾಹಿತ್ಯದಲ್ಲಿ ಬದುಕಿಗೆ ಅವಶ್ಯವಿರುವ ಸಂಸ್ಕಾರ, ಸಂಸ್ಕೃತಿ, ಮನಃಶಾಂತಿ ನೀಡುವ ತಾಕತ್ತು ಅಡಗಿದೆ ಎಂದು ಜನಪದ ಸಾಹಿತಿ ನೀಲಪ್ಪ ಹಕ್ಕಂಡಿ ತಿಳಿಸಿದರು.

ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಶ್ರೀ ಹೇಮರಡ್ಡಿ ಮಲ್ಲಮ್ಮ ಯುವ ಬಳಗದಿಂದ ಗುರುವಾರ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಬೆಳ್ಳಿ ಮೂರ್ತಿ ಅನಾವರಣ ಹಾಗೂ ತಾಲೂಕು ಮಟ್ಟದ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಜನಪದ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಪದ ಗೀತೆಗಳಲ್ಲಿ ಜೀವನದ ಮೌಲ್ಯ, ನಡೆ, ನುಡಿ, ಆಚರಣೆ, ನಂಬಿಕೆ ಇದೆ ಎಂದರು.

ಜನಪದ ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಇದು ಪಾರಂಪರಾಗತವಾಗಿ ಬಂದಿದೆ. ಅದು ಒಂದು ಮಾಧ್ಯಮವಾಗಿ ಕೆಲಸ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮೊಬೈಲ್ ಅಬ್ಬರದಲ್ಲಿ ಸಂಬಂಧಗಳ ಮೌಲ್ಯ ಕುಗ್ಗುತ್ತಿವೆ.

ಮನುಷ್ಯ ಒಬ್ಬಂಟಿಯಾಗಿ ಮೊಬೈಲ್‌ನೊಂದಿಗೆ ಕಾಲ ಕಳೆಯುತ್ತಿದ್ದಾನೆ. ಈ ಒಬ್ಬಂಟಿತನ ಆರೋಗ್ಯ ಹಾಳು ಮಾಡುವುದಲ್ಲದೆ ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ತಾಲೂಕಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶ್ರೀ ಸಾಯಿ ಮೆಲೋಡಿಸ್ ಗುಡುದೂರಕಲ್ ಹಾಗೂ ಮ್ಯೂಸಿಕ್ ಮೈಲಾರಿ ಅವರಿಂದ ಹಾಸ್ಯ, ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಜನರು ಸಂಗೀತವನ್ನು ಆಲಿಸಿ, ಮನಸೋತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net