ಸಂಭ್ರಮದ ಗೌರಿ ಹುಣ್ಣಿಮೆ

Alavandi gowri hunnime
ಅಳವಂಡಿ ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಮಹಿಳೆಯರು ಗೌರಿಹುಣ್ಣಿಮೆ ಪ್ರಯುಕ್ತ ಗೌರಿ ಮೂರ್ತಿಗೆ ಸಕ್ಕರೆ ಆರತಿ ಬೆಳಗಿ ಸಂಭ್ರಮಿಸಿದರು.
Published on

ಅಳವಂಡಿ: ವಲಯ ವ್ಯಾಪ್ತಿಯ ಗ್ರಾಮಗಳಲ್ಲಿ ಗೌರಿ ಹುಣ್ಣಿಮೆ ಪ್ರಯುಕ್ತ ಮಹಿಳೆಯರು ಶುಕ್ರವಾರ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ ಮೂರ್ತಿಗೆ ಸಕ್ಕರೆ ಆರತಿ ಬೆಳಗಿ ಸಂಭ್ರಮಿಸಿದರು.

ಮಹಿಳೆಯರು, ಮಕ್ಕಳು ಹೊಸ ಬಟ್ಟೆ ತೊಟ್ಟು ಪೂಜೆ ನೆರವೇರಿಸಿದರು. ದೀಪಾವಳಿ ನಂತರ ಬರುವ ಗೌರಿ ಹುಣ್ಣಿಮೆ, ಮಹಿಳೆಯರಿಗೆ ಅಚ್ಚು ಮೆಚ್ಚಿನ ಹಬ್ಬವಾಗಿದೆ. ಸಂಜೆಯೊಳಗೆ ಮಕ್ಕಳು ಜಮೀನುಗಳ ಬದು ಹಾಗೂ ರಸ್ತೆ ಪಕ್ಕದಲ್ಲಿ ಬೆಳೆದಿರುವ ಹೊನ್ನಂಬರಿಕೆ ಇತರ ಹೂಗಳನ್ನು ಸಂಗ್ರಹಿಸಿ ತರುತ್ತಾರೆ. ಸೂರ್ಯ ಮುಳುಗುತ್ತಿದ್ದಂತೆ ಮಹಿಳೆಯರು ತಟ್ಟೆಯಲ್ಲಿ ಸಕ್ಕರೆ ಆರತಿಗಳನ್ನಿಟ್ಟುಕೊಂಡು ಅದರಲ್ಲಿ ಹೂ ಹರಡಿಕೊಂಡು ಹಾಡು ಹೇಳುತ್ತಾ ಗುಂಪು ಗುಂಪಾಗಿ ದೇವಸ್ಥಾನಕ್ಕೆ ತೆರಳಿ ಗೌರಿ ಮೂರ್ತಿಗೆ ಆರತಿ ಬೆಳಸಿ ಹರಕೆ ತೀರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net